ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಸದ್ದು ಮಾಡುತ್ತಿರುವ ಪಿಂಕ್‌ ಬಾಲ್‌ ಬಗ್ಗೆ ನಿಮಗೆಷ್ಟು ಗೊತ್ತು?

Last Updated 22 ನವೆಂಬರ್ 2019, 11:52 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ನೆಲದಲ್ಲಿ ಇದೇ ಪ್ರಪ್ರಥಮ ಬಾರಿಗೆ ಶುಕ್ರವಾರ (ನ.22) ಪಿಂಕ್ ಬಾಲ್ ಟೆಸ್ಟ್ ಆರಂಭವಾಯಿತು. ತೀವ್ರ ಕತೂಹಲಕ್ಕೆ ಕಾರಣವಾಗಿದ್ದ ಈ ಪಂದ್ಯದಲ್ಲಿ ಟಾಸ್‌ಗೆದ್ದು ಬ್ಯಾಟಿಂಗ್‌ ಆರಂಭಿಸಿದ್ದ ಬಾಂಗ್ಲಾ ದೇಶ ಕೇವಲ106ರನ್‌ಗಳಿಗೆ ಆಲ್‌ಔಟ್‌ ಆಗಿದೆ.

ಪಿಂಕ್‌ ಬಾಲ್‌ ಪ್ರಯೋಗ ದೇಶದ ಕ್ರಿಕೆಟ್‌ ಜಗತ್ತಿನಲ್ಲಿ ಭಾರಿ ದೊಡ್ಡ ಸುದ್ದಿಯಾಗಿತ್ತು. ಕ್ರೀಡಾಭಿಮಾನಿಗಳನ್ನು ಮತ್ತಷ್ಟು ಸೆಳೆಯುವುದು ಪಿಂಕ್‌ ಬಾಲ್‌ ಟೆಸ್ಟ್‌ ಮುಖ್ಯ ಉದ್ದೇಶ ಎಂದು ಬಿಸಿಸಿಐ ಈಗಾಗಲೇ ಹೇಳಿದೆ.

ಪಿಂಕ್‌ ಬಾಲ್‌ ಕ್ರಿಕೆಟ್‌ನ ಇತರೆ ಚೆಂಡುಗಳಂತಲ್ಲ. ಅದರದ್ದೇ ವೈಶಿಷ್ಟ್ಯಗಳಿವೆ. ಈ ಮಾಹಿತಿಯನ್ನು ಬಿಸಿಸಿಐ ತನ್ನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದೆ.

–ಪಿಂಕ್‌ ಬಾಲ್‌ ಅನ್ನು ತಯಾರಿಸಲು ಕನಿಷ್ಠ 8 ದಿನಗಳು ಬೇಕು. ಆದರೆ, ಕೆಂಪು ಚೆಂಡು ತಯಾರಿಸಲು ಎರಡೇ ದಿನ ಸಾಕು.

–ವಿದೇಶದಿಂದ ತರಿಸಲಾದ ಲೆದರ್‌ (ಚರ್ಮ)ನಿಂದ ಬಾಲ್‌ ತಯಾರಾಗುತ್ತದೆ.

– ಚೆಂಡಿನ ಒಳಭಾಗವು ಮರದ ತೊಗಟೆ ಮತ್ತು ರಬ್ಬರ್‌ನಿಂದ ಮಾಡಲ್ಪಟ್ಟಿರುತ್ತದೆ.

–ಇದರ ಸುತ್ತಳತೆಯು22.5 ಸೆಂಟಿಮೀಟರ್‌ಗಳು

–ಚೆಂಡಿಗೆ ಎರಡು ಮಾದರಿಯಲ್ಲಿ ಹೊಲಿಗೆ ಹಾಕಲಾಗಿರುತ್ತದೆ. ಚೆಂಡಿನ ಎರಡು ಮೇಲ್ಮೈಗಳನ್ನು ಒಂದು ಹೊಲಿಗೆ ಜೋಡಿಸುತ್ತದೆ. ಪ್ರನೌನ್ಸ್‌ಸ್ಡ್‌ ಸ್ಟಿಚ್‌ (pronounced stitch) ಎಂಬ ಹೊಲಿಗೆಯು ಚೆಂಡನ್ನು ಆವರಿಸಿಕೊಂಡಿರುತ್ತದೆ. ಈ ಹೊಲಿಗೆ ಚೆಂಡಿನ ಮಧ್ಯಭಾಗದಲ್ಲಿ ಎರಡೂ ಕಡೆಗಳಲ್ಲಿ ಇರುತ್ತದೆ.

–ಪ್ರನೌನ್ಸ್‌ಸ್ಡ್‌ ಸ್ಟಿಚ್‌ ಬೌಲರ್‌ಗೆ ಚೆಂಡಿನ ಹಿಡಿತಕ್ಕೆ ನೆರವಾಗುತ್ತದೆ.

–ಕ್ರೀಡಾ ಪರಿಕರ ಉತ್ಪಾದನಾ ಸಂಸ್ಥೆ, ಮೀರತ್‌ನಲ್ಲಿರುವ ಸಾನ್ಸ್‌ಪರಿಯಲ್ಸ್‌ ಗ್ರೀನ್‌ಲ್ಯಾಂಡ್ಸ್‌(ಎಸ್‌ಜಿ) ಇದನ್ನು ತಯಾರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT