ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ಬದಲಾವಣೆಯು ವಿರಾಟ್ ಕೊಹ್ಲಿ ಪಾಲಿಗೆ ಉತ್ತಮವಾಗಿ ಪರಿಣಮಿಸಲಿದೆ ಎಂದು ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೆ ಇಂಡಿಯನ್ ಪ್ರೀಮಿಯರ್ ಲೀಗ್ 2016ರ ಆವೃತ್ತಿಯಂತೆ 900ಕ್ಕೂ ಹೆಚ್ಚು ರನ್ ಗಳಿಸಲು ವಿರಾಟ್‌ಗೆ ಸಾಧ್ಯವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:IPL 2022: ಅಭ್ಯಾಸದ ಅವಧಿಯಲ್ಲಿ ಧೋನಿಯನ್ನು ತಬ್ಬಿಕೊಂಡ ಕೊಹ್ಲಿ

ಭಾನುವಾರ ಮುಂಬೈನ ಡಿ.ವೈ. ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಆರ್‌ಸಿಬಿ ತಂಡವು ಪಂಜಾಬ್ ಕಿಂಗ್ಸ್ ಸವಾಲನ್ನು ಎದುರಿಸಲಿದೆ. ಈ ಹಿನ್ನೆಲೆಯಲ್ಲಿ ಎಲ್ಲರ ಗಮನ ಕೊಹ್ಲಿ ಮೇಲೆ ನೆಟ್ಟಿದೆ.

ನೀವು ನಾಯಕರಾಗಿದ್ದಾಗ, ಇತರೆ 10 ಆಟಗಾರರು ಹಾಗೂ ತಂಡದ ಬಗ್ಗೆ ಯೋಚಿಸುತ್ತೀರಿ. ತಂಡದ ಆಟಗಾರರು ಚೆನ್ನಾಗಿ ಆಡದಿದ್ದಾಗ ಅವರ ಫಾರ್ಮ್ ಬಗ್ಗೆ ಚಿಂತೆ ಕಾಡುತ್ತದೆ. ಆದರೆ ಈ ಬಾರಿ 2016ರ ಕೊಹ್ಲಿಯನ್ನು ಕಾಣಬಹುದಾಗಿದೆ ಎಂದು ಹೇಳಿದ್ದಾರೆ.

2016ರಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ, 81.08ರ ಸರಾಸರಿಯಲ್ಲಿ ದಾಖಲೆಯ 973 ರನ್ ಪೇರಿಸಿದ್ದರು. ಇದು ನಾಲ್ಕು ಶತಕಗಳನ್ನು ಒಳಗೊಂಡಿತ್ತು.

2012ರಲ್ಲಿ ಆರ್‌ಸಿಬಿ ನಾಯಕರಾಗಿ ಕೊಹ್ಲಿ ನೇಮಕಗೊಂಡಿದ್ದರು. ಆದರೆ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿರಲಿಲ್ಲ. ಈಗ ಕೊಹ್ಲಿ ಅವರಿಂದ ತೆರವಾಗಿರುವ ನಾಯಕ ಸ್ಥಾನಕ್ಕೆ ಫಫ್ ಡು ಪ್ಲೆಸಿ ಅವರನ್ನು ನೇಮಕಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.