ನ್ಯೂಯಾರ್ಕ್: ಭಾರತ ಕ್ರಿಕೆಟ್ ತಂಡದ ಆಟಗಾರ ಸೂರ್ಯಕುಮಾರ್ ಯಾದವ್ ಅವರು ಸ್ಪೋರ್ಟ್ಸ್ ಹರ್ನಿಯಾ ಶಸ್ತಚಿಕಿತ್ಸೆಯ ನಂತರ ಕ್ರಿಕೆಟ್‌ಗೆ ಮರಳಲು ತಮ್ಮ ದೇಹದ 12 ರಿಂದ 14 ಕೆ.ಜಿ ತೂಕ ಇಳಿಸಿದ್ದರಂತೆ!

ಹೋದ ಡಿಸೆಂಬರ್‌ನಲ್ಲಿ ಅವರು ತಮ್ಮ ಹಿಮ್ಮಡಿಯ ಗಾಯ ಹಾಗೂ ಸ್ಪೋರ್ಟ್ಸ್ ಹರ್ನಿಯಾ ಶಸ್ತ್ರಚಿಕಿತ್ಸೆ ಪಡೆದಿದ್ದರು. ಟಿ20 ಮಾದರಿಯಲ್ಲಿ ವಿಶ್ವದ ಅಗ್ರಮಾನ್ಯ ಬ್ಯಾಟರ್ ಅಗಿರುವ ಸೂರ್ಯ ಆ ಸಂದರ್ಭದಲ್ಲಿ ನಾಲ್ಕು ತಿಂಗಳು ವಿಶ್ರಾಂತಿ ಪಡೆದಿದ್ದರು.

ನಂತರ ಎಸ್‌ಸಿಎಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡರು. ನಂತರ ಆಹಾರದಲ್ಲಿಯೇ ಪಥ್ಯ ಮತ್ತು ಪೌಷ್ಟಿಕ ಆಹಾರ ಸೇವನೆ ಮೂಲಕ ತಮ್ ದೇಹತೂಕ ಸರಿದೂಗಿಸಿಕೊಂಡಿದ್ಧಾರೆ.

‘ಈಗ ಅವರನ್ನು ನೋಡಿದರೆ ಮೊದಲಿಗಿಂತ ನೀಳಕಾಯ ಹಾಗೂ ಬಲಿಷ್ಠವಾಗಿ ಕಾಣುತ್ತಿದ್ದಾರೆ. ಮಾಂಸಖಂಡಗಳೂ ಆರೋಗ್ಯಯುತವಾಗಿವೆ. ಯೋಜನಾಬದ್ಧ ಆಹಾರ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಅವರು ತೂಕ ಇಳಿಸಿಕೊಂಡಿದ್ದಾರೆ’ ಎಂದು ಸೂರ್ಯ ಅವರಿಗೆ ಪೌಷ್ಟಿಕ ಆಹಾರ ಮಾರ್ಗದರ್ಶನ ನೀಡಿದ ಮೈಂಡ್ ಯುವರ್ ಫಿಟ್‌ನೆಸ್ ಸಂಸ್ಥೆಯ ಆಹಾರ ತಜ್ಞೆ ಶ್ವೇತಾ ಭಾಟಿಯಾ ಹೇಳಿದ್ದಾರೆ.

ಸೂರ್ಯ ಅವರು ಐಪಿಎಲ್‌ನಲ್ಲಿ ಆಡಿದ್ದರು. ಇದೀಗ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಆಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.