ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಟಿ20 ಚಾಲೆಂಜರ್ಸ್ ಟೂರ್ನಿ ಇಂದಿನಿಂದ: ಸೂಪರ್ ನೋವಾಗೆ ವೆಲೊಸಿಟಿ ಸವಾಲು

ಮಹಿಳಾ ಟಿ20 ಚಾಲೆಂಜರ್ಸ್ ಟೂರ್ನಿ ಇಂದಿನಿಂದ
Last Updated 3 ನವೆಂಬರ್ 2020, 15:43 IST
ಅಕ್ಷರ ಗಾತ್ರ

ಶಾರ್ಜಾ: ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಸೂಪರ್ ನೋವಾ ತಂಡವು ಮೂರನೇ ಬಾರಿ ಮಹಿಳಾ ಚಾಲೆಂಜರ್ಸ್ ಟಿ20 ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಜಯಿಸುವತ್ತ ಚಿತ್ತ ನೆಟ್ಟಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಅಂಗವಾಗಿ ಈ ಮಹಿಳಾ ಟೂರ್ನಿ ನಡೆಯಲಿದೆ. ಇದರಲ್ಲಿ ಮೂರು ತಂಡಗಳು ಆಡಲಿವೆ. ಸೂಪರ್ ನೋವಾ ತಂಡವು ಮಿಥಾಲಿ ರಾಜ್ ನಾಯಕಿಯಾಗಿರುವ ವೆಲೊಸಿಟಿ ತಂಡವನ್ನು ಬುಧವಾರ ಎದುರಿಸಲಿದೆ.

ಪೂರ್ಣಪ್ರಮಾಣದ ಮಹಿಳಾ ಐಪಿಎಲ್ ಆಯೋಜಿಸಬೇಕು ಎಂಬ ಬೇಡಿಕೆ ಇದೆ. ಅದರ ಪೂರ್ವಭಾವಿಯಾಗಿ ಈ ಟೂರ್ನಿ ನಡೆಯುತ್ತಿದೆ. ಸೂಪರ್ ನೋವಾ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಬಿಗ್‌ಬ್ಯಾಷ್ ಲೀಗ್‌ನಲ್ಲಿ ಆಡಿರುವ ಅನುಭವಿ. ಹೋದ ಬಾರಿ ಟಿ20 ವಿಶ್ವಕಪ್ ಫೈನಲ್ ತಲುಪಿದ ಭಾರತ ತಂಡದ ಬಹುತೇಕ ಎಲ್ಲ ಆಟಗಾರ್ತಿಯರೂ ಈ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಕರ್ನಾಟಕದ ವೇದಾ ಕೃಷ್ಣಮೂರ್ತಿ ಮತ್ತು ಎಡಗೈ ಸ್ಪಿನ್ನರ್‌ ಎಂ.ಅನಘಾ ಕೂಡ ಇದ್ದಾರೆ.

ತಂಡಗಳು: ಸೂಪರ್ ನೋವಾ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರಾಡ್ರಿಗಸ್ (ಉಪನಾಯಕಿ), ಚಾಮರಿ ಅಟಪಟ್ಟು ಪ್ರಿಯಾ ಪೂನಿಯಾ, ಅನುಜಾ ಪಾಟೀಲ, ರಾಧಾ ಯಾದವ್, ತಾನಿಯಾ ಭಾಟಿಯಾ (ವಿಕೆಟ್‌ಕೀಪರ್), ಶಶಿಕಲಾ ಸಿರಿವರ್ಧನೆ, ಪೂನಂ ಯಾದವ್, ಶಕೀರಾ ಸೆಲ್ಮನ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಕರ್, ಆಯುಷ್ ಸೋನಿ, ಅಯಾಬೋಂಗಾ ಕಾಕಾ, ಮುಸ್ಕಾನ್ ಮಲಿಕ್

ವೆಲೊಸಿಟಿ:ಮಿಥಾಲಿ ರಾಜ್ (ನಾಯಕಿ), ವೇದಾಕೃಷ್ಣಮೂರ್ತಿ (ಉಪನಾಯಕಿ), ಶೆಫಾಲಿ ವರ್ಮಾ, ಸುಷ್ಮಾ ವರ್ಮಾ (ವಿಕೆಟ್‌ಕೀಪರ್), ಏಕ್ತಾ ಬಿಷ್ಠ್, ಮಾನಸಿ ಜೋಶಿ, ಶಿಖಾ ಪಾಂಎ, ದೇವಿಕಾ ವೈದ್ಯ, ಸುಶ್ರೀ ದಿವ್ಯದರ್ಶಿನಿ, ಮನಾಲಿ ದಕ್ಷಿಣಿ, ಲೀಗ್ ಕಾಸ್ಪರೆಕ್, ಡೇನಿಯಲ್ ವೈಟ್, ಸುನಿ ಲಾಸ್, ಜಹಾನರಾ ಆಲಂ, ಎಂ. ಅನಘಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT