ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಏಷ್ಯಾ ಕಪ್ ಟಿ20 ಫೈನಲ್: ಭಾರತ ಎದುರು ಬ್ಯಾಟಿಂಗ್ ಆರಂಭಿಸಿದ ಲಂಕಾ

Last Updated 15 ಅಕ್ಟೋಬರ್ 2022, 8:26 IST
ಅಕ್ಷರ ಗಾತ್ರ

ಸಿಲೆಟ್ (ಬಾಂಗ್ಲಾದೇಶ): ಮಹಿಳೆಯರ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸುತ್ತಿವೆ.

ಟಾಸ್‌ ಗೆದ್ದಿರುವ ಶ್ರೀಲಂಕಾ, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಏಳನೇ ಸಲ ಪ್ರಶಸ್ತಿ ಜಯದ ಮೇಲೆ ಕಣ್ಣಿಟ್ಟಿರುವ ಭಾರತ ತಂಡವು ಲಂಕಾ ಬಳಗಕ್ಕಿಂತ ಬಲಾಢ್ಯ ಹಾಗೂ ಅನುಭವಿ ಆಟಗಾರ್ತಿಯರನ್ನು ಒಳಗೊಂಡಿದೆ.

ಸೆಮಿಫೈನಲ್‌ನಲ್ಲಿ ಭಾರತವು ಥಾಯ್ಲೆಂಡ್ ಎದುರು ಸುಲಭವಾಗಿ ಗೆದ್ದಿತ್ತು. ಆದರೆ, ಇನ್ನೊಂದು ಸೆಮಿಫೈನಲ್‌ನಲ್ಲಿ ಪಾಕಿಸ್ತಾನದ ಕಠಿಣ ಸವಾಲನ್ನು ಮೆಟ್ಟಿ ನಿಂತಿದ್ದ ಲಂಕಾ ತಂಡವು ಕೇವಲ 1 ರನ್ ಅಂತರದ ರೋಚಕ ಜಯಸಾಧಿಸಿತ್ತು. ಆದ್ದರಿಂದ ಭಾರತ ತಂಡಕ್ಕೆ ಲಂಕಾ ಬಳಗವು ದಿಟ್ಟ ಸವಾಲು ಒಡ್ಡುವ ನಿರೀಕ್ಷೆ ಇದೆ.

ತಂಡಗಳು: ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್‌ಕೀಪರ್), ಪೂಜಾ ವಸ್ತ್ರಕರ್, ಸ್ನೇಹಾ ರಾಣಾ, ರೇಣುಕಾ ಠಾಕೂರ್, ರಾಜೇಶ್ವರಿ ಗಾಯಕವಾಡ.

ಶ್ರೀಲಂಕಾ: ಚಾಮರಿ ಅಟಪಟ್ಟು (ನಾಯಕಿ), ಅನುಷ್ಕಾ ಸಂಜೀವನಿ, ಹರ್ಷಿತಾ ಸಮರವಿಕ್ರಮ, ಹಸಿನಿ ಪೆರೆರಾ, ನೀಲಾಕ್ಷಿ ಡಿಸಿಲ್ವಾ, ಕವೀಶಾ ದಿಲಹರಿ, ಮಾಲ್ಶಾ ಶೆಹಾನಿ, ಒಡದಿ ರಣಸಿಂಗೆ, ಸುಗಂಧ ಕುಮಾರಿ, ಇನೊಕಾ ರಣವೀರಾ, ಅಕಿನಿ ಕುಲಸೂರಿಯಾ

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT