ತವರಿನಂಗಳದಲ್ಲಿ ಆಡುತ್ತಿರುವುದು ಅತ್ಮವಿಶ್ವಾಸ ಹೆಚ್ಚಿಸಿದೆ. ಸ್ಥಳೀಯ ಅಭಿಮಾನಿಗಳ ಪ್ರೋತ್ಸಾಹ ಮತ್ತು ಆ ಚೈತನ್ಯಯುತ ವಾತಾವರಣವು ನಮಗೆ ಅಗತ್ಯವಾಗಿದ.ಎ ಕಳೆದ ಏಷ್ಯಾ ಕಪ್ ಸಂದರ್ಭದಲ್ಲಿ ನಮಗೆ ಇಂತಹದೇ ವಾತಾವರಣದಿಂದ ಅನುಕೂಲವಾಗಿತ್ತು.ಚಾಮರಿ ಅಟಪಟ್ಟು ಶ್ರೀಲಂಕಾ ತಂಡದ ನಾಯಕಿ
ಪ್ರಶಸ್ತಿ ಉಳಿಸಿಕೊಳ್ಳುವುದು ಸುಲಭದ ಮಾತಲ್ಲ. ಈ ವಿಶ್ವಕಪ್‌ನಲ್ಲಿ ಕಣಕ್ಕಿಳಿಯುತ್ತಿರುವ ಪ್ರತಿ ತಂಡವೂ ಪ್ರಶಸ್ತಿ ಗೆಲ್ಲುವ ಸಾಮರ್ಥ್ಯ ಹೊಂದಿವೆ. ಈ ಟೂರ್ನಿಯಲ್ಲಿ ಪ್ರತಿ ತಂಡದ ಎದುರು ಮೇಲುಗೈ ಸಾಧಿಸಿದರೆ ಮಾತ್ರ ಕಪ್ ಉಳಿಸಿಕೊಳ್ಳಲು ಸಾಧ್ಯ ಎಂಬುದು ನಮಗೆ ಅರಿವು ಇದೆ.ಅಲೀಸಾ ಹೀಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡದ ನಾಯಕಿ
ನಮ್ಮ ತಂಡದಲ್ಲಿರುವ ಯುವ ಆಟಗಾರ್ತಿಯರು ಹಾಗೂ ಅನುಭವಿಗಳ ಹೊಂದಾಣಿಕೆ ಉತ್ತಮವಾಗಿದೆ. ಈ ಟೂರ್ನಿಯಲ್ಲಿ ಉತ್ಕೃಷ್ಟ ದರ್ಜೆಯ ಕ್ರಿಕೆಟ್ ನಡೆಯಲಿದ್ದು ನಮ್ಮ ತಂಡದ ಯುವ ಮತ್ತು ಅನುಭವಿಗಳು ಇದನ್ನು ಸಮರ್ಥವಾಗಿ ನಿಭಾಯಿಸಬಲ್ಲರು.ನ್ಯಾಟ್ ಸಿವರ್ ಬ್ರಂಟ್ ಇಂಗ್ಲೆಂಡ್ ತಂಡದ ನಾಯಕಿ
ವಿಶ್ವಕಪ್ ಜಯಿಸಲೆಂದೇ ನಾವು ಇಲ್ಲಿಗೆ ಬಂದಿದ್ದೇವೆ. ಸಂಪೂರ್ಣವಾಗಿ ಉತ್ತಮವಾದ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಜಾಗತಿಕವಾಗಿ ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ಸಿಗುತ್ತಿರುವು ಪ್ರೋತ್ಸಾಹವು ಉತ್ತಮವಾಗಿದೆ. ಭಾರತದಲ್ಲಿ ಕ್ರಿಕೆಟ್ ಆಡುವುದು ಒಂದು ವಿಶಿಷ್ಟ ಅನುಭವ.ಸೋಫಿ ಡಿವೈನ್ ನ್ಯೂಜಿಲೆಂಡ್ ತಂಡದ ನಾಯಕಿ
ಕೊಲಂಬೊದಲ್ಲಿ ಪಂದ್ಯಗಳನ್ನು ಆಡುತ್ತಿರುವುದು ನಮಗೆ ಹೆಚ್ಚು ಅನುಕೂಲಕರವಾಗಿದೆ. ನಮ್ಮ ಎಲ್ಲ ಪಂದ್ಯಗಳೂ ಒಂದೇ ತಾಣದಲ್ಲಿ ನಡೆಯುತ್ತಿವೆ. ಉತ್ತಮ ಪ್ರದರ್ಶನ ನೀಡಲು ನಮಗೆ ಸಾಧ್ಯವಾಗಲಿದೆ.ಫಾತಿಮಾ ಸನಾ ಪಾಕ್ ತಂಡದ ನಾಯಕಿ
ನಮ್ಮ ತಂಡಕ್ಕೆ ಇದು ಎರಡನೇ ವಿಶ್ವಕಪ್ ಟೂರ್ನಿ. ಅಂತರರಾಷ್ಟ್ರೀಯ ವೇದಿಕೆ ಮತ್ತು ದೊಡ್ಡಮಟ್ಟದ ಪಂದ್ಯಗಳಲ್ಲಿ ಆಡಿ ಗೆಲ್ಲುವ ಅನುಭವ ನಮಗೆ ಇದಕ್ಕೂ ಮುನ್ನ ಇರಲಿಲ್ಲ. ಕಳೆದ ಒಂದೆರಡು ವರ್ಷಗಳಲ್ಲಿ ತವರು ಮತ್ತು ವಿದೇಶಿ ನೆಲದಲ್ಲಿ ಬಹಳಷ್ಟು ಪಂದ್ಯಗಳನ್ನು ಆಡಿರುವ ಅನುಭವ ನಮಗಾಗಿರುವುದು ಆತ್ಮವಿಶ್ವಾಸ ಹೆಚ್ಚಿಸಿದೆ.ನಿಜಾರ್ ಸುಲ್ತಾನಾ ಬಾಂಗ್ಲಾ ತಂಡದ ನಾಯಕಿ
ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ ಪ್ರತಿ ತಂಡವೂ ಬಲಿಷ್ಠವಾಗಿದೆ. ಅದರಲ್ಲೂ ಉಪಖಂಡದ ಬಳಗಗಳು ತಮ್ಮ ಎದುರಾಳಿಗಳಿಗೆ ಕಠಿಣ ಸವಾಲೊಡ್ಡಲಿವೆ. ಆದ್ದರಿಂದ ನಮ್ಮ ತಂಡವು ಒಂದೊಂದೇ ಮೆಟ್ಟಿಲನ್ನು ಹತ್ತುತ್ತ ಸಾಗಲಿದ್ದೇವೆ.ಲಾರಾ ವೊಲ್ವಾರ್ಡ್ಟ್ ದ.ಆಫ್ರಿಕಾ ನಾಯಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.