ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಟಿ20 ಚಾಲೆಂಜ್‌ ರದ್ದು ಸಾಧ್ಯತೆ

Last Updated 28 ಏಪ್ರಿಲ್ 2021, 12:22 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯ ಅಂಗವಾಗಿ ನಡೆಯುವ ಮಹಿಳಾ ಟಿ20 ಚಾಲೆಂಜ್‌ ಈ ವರ್ಷ ನಡೆಯುವ ಸಾಧ್ಯತೆಗಳಿಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೂಲಗಳು ತಿಳಿಸಿವೆ.

ಸೂಪರ್‌ನೋವಾ, ವೆಲೋಸಿಟಿ ಮತ್ತು ಟ್ರೇಲ್‌ಬ್ಲೇಜರ್ಸ್‌ ತಂಡಗಳನ್ನು ಒಳಗೊಂಡ ಮಹಿಳಾ ಚಾಲೆಂಜ್ ಹಿಂದಿನ ಆವೃತ್ತಿಗಳಲ್ಲಿ ನಡೆದಿತ್ತು. ಈ ಬಾರಿ ಕೋವಿಡ್‌–19ರಿಂದಾಗಿ ಪರಿಸ್ಥಿತಿ ಪೂರಕವಾಗಿಲ್ಲ. ವಿವಿಧ ಸರಣಿಗಳಿಗಾಗಿ ಮಹಿಳಾ ಕ್ರಿಕೆಟಿಗರ ಶಿಬಿರವೊಂದನ್ನು ಬಿಸಿಸಿಐ ಸದ್ಯದಲ್ಲೇ ಏರ್ಪಡಿಸಲಿದೆ. ಹೀಗಾಗಿ ಭಾರತದ ಆಟಗಾರ್ತಿಯರು ಲಭ್ಯವಾಗುತ್ತಾರೆ. ಆದರೆ ಆಸ್ಟ್ರೇಲಿಯಾ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಆಟಗಾರ್ತಿಯರಿಗೆ ಪಾಲ್ಗೊಳ್ಳಲು ಆಗುವುದಿಲ್ಲ.

‘ಭಾರತದ ಆಟಗಾರ್ತಿಯರನ್ನು ಕ್ವಾರಂಟೈನ್‌ನಲ್ಲಿರಿಸುವುದು ಕಷ್ಟದ ಕೆಲಸವಲ್ಲ. ಆದರೆ ವಿದೇಶಿ ಆಟಗಾರ್ತಿಯರು ಭಾರತಕ್ಕೆ ಪಯಣಿಸುವುದು ಕಷ್ಟ. ಪರಿಸ್ಥಿತಿ ಸರಿಹೋದ ಮೇಲೆ ಮಹಿಳೆಯರಿಗಾಗಿ ಪಂದ್ಯಗಳನ್ನು ಆಯೋಜಿಸುವ ಕುರಿತು ಯೋಚಿಸಲಾಗುವುದು’ ಎಂದು ಬಿಸಿಸಿಐ ತಿಳಿಸಿದೆ.

ಕಳೆದ ಬಾರಿ ಐಪಿಎಲ್‌ ಯುಎಇಯಲ್ಲಿ ನಡೆದಿತ್ತು. ಬಿಗ್‌ ಬ್ಯಾಷ್ ಟೂರ್ನಿ ನಡೆಯುತ್ತಿದ್ದ ಕಾರಣ ಆಸ್ಟ್ರೇಲಿಯಾದ ಯಾವ ಆಟಗಾರ್ತಿಯರೂ ಮಹಿಳಾ ಚಾಲೆಂಜ್‌ನಲ್ಲಿ ಪಾಲ್ಗೊಂಡಿರಲಿಲ್ಲ.

‘ಕೋವಿಡ್‌ನಿಂದಾಗಿ ಇಂಗ್ಲೆಂಡ್‌, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಈಗಾಗಲೇ ವಿಮಾನಯಾನವನ್ನು ರದ್ದುಗೊಳಿಸಿವೆ. ಹೀಗಾಗಿ ಅಲ್ಲಿನ ಆಟಗಾರ್ತಿಯರು ಬರಲು ಸಾಧ್ಯವೇ ಇಲ್ಲ. ಇಷ್ಟು ಮಾತ್ರವಲ್ಲದೆ ಈ ಬಾರಿ ದೆಹಲಿಯಲ್ಲಿ ಮಹಿಳಾ ಚಾಲೆಂಜ್ ಆಯೋಜಿಸಲು ನಿರ್ಧರಿಸಲಾಗಿತ್ತು. ಸದ್ಯ ದೆಹಲಿಗೆ ಹೋಗಲು ಯಾರೊಬ್ಬರೂ ಇಷ್ಟಪಡುತ್ತಿಲ್ಲ. ಆದ್ದರಿಂದ ಟೂರ್ನಿ ನಡೆಯುವ ಸಾಧ್ಯತೆಯೇ ಇಲ್ಲ’ ಎಂದು ಮೂಲವೊಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT