ಮಂಗಳವಾರ, ಜೂಲೈ 7, 2020
28 °C

Womens T20 World Cup final ಸವಾಲಿನ ಮೊತ್ತ ಪೇರಿಸಿದ ಆಸ್ಟ್ರೇಲಿಯಾದ ವನಿತೆಯರು 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್‌:  ಭಾರತದ ವಿರುದ್ಧ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಆಸ್ಟ್ರೇಲಿಯಾ ವನಿತೆಯರ ಪಡೆ 20 ಓವರ್‌ಗಳಲ್ಲಿ 184ರನ್‌ಗಳ ಸವಾಲಿನ ಮೊತ್ತ ಪೇರಿಸಿದೆ. 

ಆರಂಭಿಕರಾಗಿ ಅಂಗಳಕ್ಕಿಳಿದ ಹೇಲಿ (75) ಮತ್ತು ಮೂನಿ (78) ಅವರು ಭರ್ಜರಿ ಆಟ ಪ್ರದರ್ಶಿಸಿದರು. ಇವರಿಬ್ಬರ ಸ್ಪೋಟಕ ಆಟದ ನೆರವಿನೊಂದಿಗೆ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟದೊಂದಿಗೆ 184ರನ್‌ ಗಳಿಸಿದೆ. 

ಭಾರತದ ಪರ ಡಿಬಿ ಶರ್ಮಾ ಅವರು ಎರಡು ವಿಕೆಟ್‌ ಪಡೆದರು. ಪೂನಮ್‌ ಯಾದವ್‌ ಮತ್ತು ರಾಧಾ ಯಾದವ್‌ ಅವರು ತಲಾ ಒಂದೊಂದು ವಿಕೆಟ್‌ ಪಡೆದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು