ಮುಂಬೈ: ನಥಾಲಿ ಶಿವರ್ ಬ್ರಂಟ್ ಅವರ ಆಲ್ರೌಂಡ್ ಆಟದ ಬಲದಿಂದ ಮುಂಬೈ ಇಂಡಿಯನ್ಸ್ ತಂಡವು ಎರಡನೇ ಬಾರಿಗೆ ಮಹಿಳಾ ಪ್ರೀಮಿಯರ್ ಲೀಗ್ ಪ್ರಶಸ್ತಿ ಜಯಿಸಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸತತ ಮೂರನೇ ಬಾರಿ ರನ್ನರ್ಸ್ ಅಪ್ ಆಯಿತು.

ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ರೋಚಕ ಫೈನಲ್ನಲ್ಲಿ ಮುಂಬೈ ತಂಡವು 8 ರನ್ಗಳಿಂದ ಡೆಲ್ಲಿ ತಂಡವನ್ನು ಸೋಲಿಸಿತು. 150 ರನ್ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಮೆಗ್ ಲ್ಯಾನಿಂಗ್ ಬಳಗಕ್ಕೆ 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 141 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಮರಿಝಾನ್ ಕಾಪ್ (40 ಹಾಗೂ 11ಕ್ಕೆ2) ಆಲ್ರೌಂಡ್ ಆಟ, ಜೆಮಿಮಾ ರಾಡ್ರಿಗಸ್ (30;21ಎ) ಮತ್ತು ನಿಕಿ ಪ್ರಸಾದ್ (ಅಜೇಯ 25) ಅವರ ಹೋರಾಟಕ್ಕೆ ಗೆಲುವಿನ ಫಲ ಸಿಗಲಿಲ್ಲ.

ಆದರೆ ಬ್ರಂಟ್ (30 ರನ್ ಮತ್ತು 30ಕ್ಕೆ3) ಆಲ್ರೌಂಡ್ ಆಟವೇ ಮೇಲುಗೈ ಸಾಧಿಸಿತು. ಡೆಲ್ಲಿ ತಂಡದ ಮೆಗ್ ಲ್ಯಾನಿಂಗ್ (13 ರನ್) ಉತ್ತಮ ಆರಂಭ ನೀಡುವ ಪ್ರಯತ್ನ ಮಾಡಿದರು. ಆದರೆ ಅವರನ್ನು ತಮ್ಮ ಮೊದಲ ಓವರ್ನಲ್ಲಿಯೇ ಕ್ಲೀನ್ ಬೌಲ್ಡ್ ಮಾಡಿದ ಬ್ರಂಟ್ ಬೇಟೆ ಆರಂಭಿಸಿದರು.

ನಂತರದ ಓವರ್ನಲ್ಲಿ ಶಫಾಲಿ ವರ್ಮಾ ಅವರನ್ನು ಶಬ್ನಿಮ್ ಇಸ್ಮಾಯಿಲ್ ಅವರು ಎಲ್ಬಿಡಬ್ಲ್ಯುಗೆ ಕೆಡವಿದರು. ಜೆಸ್ ಜೊನಾಸೆನ್ (13 ರನ್) ಮತ್ತು ಅನಾಬೆಲ್ ಸದರ್ಲೆಂಡ್ (2 ರನ್) ಬೇಗನೆ ಔಟಾದರು. ಭರವಸೆ ಮೂಡಿಸಿದ್ದ ಜೆಮಿಮಾ ರಾಡ್ರಿಗಸ್ ಅವರ ವಿಕೆಟ್ ಗಳಿಸುವಲ್ಲಿ ಅಮೆಲಿಯಾ ಕೆರ್ ಯಶಸ್ವಿಯಾದರು. ಇದರಿಂದಾಗಿ ತಂಡವು 66 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತು.

ಈ ಹಂತದಲ್ಲಿ ಜೊತೆಯಾದ ಕಾಪ್ ಮತ್ತು ನಿಕಿ ಪ್ರಸಾದ್ 7ನೇ ವಿಕೆಟ್ ಜೊತೆಯಾಟದಲ್ಲಿ 40 ರನ್ ಸೇರಿಸಿದರು. ಈ ಸಂದರ್ಭದಲ್ಲಿ ಡೆಲ್ಲಿ ತಂಡಕ್ಕೆ ಗೆಲುವು ಸಾಧ್ಯವೆನಿಸಿತ್ತು. ಆದರೆ ಮತ್ತೆ ದಾಳಿಗೆ ಇಳಿದ ಬ್ರಂಟ್ ಚಿತ್ರಣ ಬದಲಿಸಿಬಿಟ್ಟರು. ಅಕ್ಷರಶಃ ಡೆಲ್ಲಿ ಕೈಯಿಂದ ಜಯವನ್ನು ಕಸಿದುಕೊಂಡರು. 18ನೇ ಓವರ್ನಲ್ಲಿ ಕಾಪ್ ಮತ್ತು ಶಿಖಾ ಪಾಂಡೆ ಇಬ್ಬರಿಗೂ ಪೆವಿಲಿಯನ್ ದಾರಿ ತೋರಿಸಿದರು.

ಹರ್ಮನ್ ಅರ್ಧಶತಕದ ಆಸರೆ: ಡೆಲ್ಲಿ ಕ್ಯಾಪಿಟಲ್ಸ್ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮುಂಬೈ ತಂಡವು ಕೌರ್ (66;44ಎ, 4X9, 6X2) ಮತ್ತು ಬ್ರಂಟ್ (30; 28ಎ, 4X4) ಅವರ ಆಟದ ಬಲದಿಂದ 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 149 ರನ್ ಗಳಿಸಿತು.

ಡೆಲ್ಲಿ ತಂಡದ ಮಧ್ಯಮವೇಗಿ ಕಾಪ್ ಅವರು ಮುಂಬೈಗೆ ಆರಂಭದಲ್ಲಿಯೇ ಆಘಾತ ನೀಡಿದರು. ಇನಿಂಗ್ಸ್ನ ಮೂರನೇ ಓವರ್ನಲ್ಲಿ ಹೇಯ್ಲಿ ಮ್ಯಾಥ್ಯೂಸ್ ವಿಕೆಟ್ ಪಡೆದ ಕಾಪ್ ಅವರು, 5ನೇ ಓವರ್ನಲ್ಲಿ ಯಷ್ಟಿಕಾ ಭಾಟಿಯಾ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಇದರಿಂದಾಗಿ ಕೇವಲ 14 ರನ್ಗಳಿಗೆ 2 ವಿಕೆಟ್ಗಳು ಪತನವಾದವು.

ಈ ಹಂತದಲ್ಲಿ ಜೊತೆಗೂಡಿದ ಬ್ರಂಟ್ ಮತ್ತು ಹರ್ಮನ್ಪ್ರೀತ್ ಮೂರನೇ ವಿಕೆಟ್ ಜೊತೆಯಾಟದಲ್ಲಿ 89 ರನ್ ಸೇರಿಸಿದರು.

ಮುಂಬೈ ತಂಡವು 2023ರಲ್ಲಿ ನಡೆದಿದ್ದ ಚೊಚ್ಚಲ ಡಬ್ಲ್ಯುಪಿಎಲ್ ಪ್ರಶಸ್ತಿ ಜಯಿಸಿತ್ತು.

ನಥಾಲಿ ಶಿವರ್ ಬ್ರಂಟ್ ಸಾವಿರ ರನ್

ಮುಂಬೈ ಇಂಡಿಯನ್ಸ್ ತಂಡದ ಆಲ್ರೌಂಡರ್ ನಥಾಲಿ ಶಿವರ್ ಬ್ರಂಟ್ ಅವರು ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಒಂದು ಸಾವಿರ ರನ್ ಗಳಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು.

ಶನಿವಾರ ಅವರು ಈ ಮೈಲಿಗಲ್ಲು ದಾಟಿದರು. ಇಂಗ್ಲೆಂಡ್ ಆಲ್ರೌಂಡರ್ ಆಗಿರುವ ಬ್ರಂಟ್ ಅವರು ಡಬ್ಲ್ಯುಪಿಎಲ್ನಲ್ಲಿ ಒಟ್ಟು 29 ಪಂದ್ಯಗಳಿಂದ 1027 ರನ್ ಗಳಿಸಿದ್ದಾರೆ.

ಆರ್ಸಿಬಿಯ ಎಲಿಸ್ ಪೆರಿ (972), ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಗ್ ಲ್ಯಾನಿಂಗ್ (939), ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶಫಾಲಿ ವರ್ಮಾ (861) ಮತ್ತು ಮುಂಬೈನ ಹರ್ಮನ್ಪ್ರೀತ್ (851) ಅವರು ನಂತರದ ಸ್ಥಾನಗಳಲ್ಲಿದ್ದಾರೆ.

ಸ್ಕೋರ್ ಕಾರ್ಡ್

ಮುಂಬೈ ಇಂಡಿಯನ್ಸ್ 7ಕ್ಕೆ 149 (20 ಓವರ್ಗಳಲ್ಲಿ)

ಯಷ್ಟಿಕಾ ಸಿ ರಾಡ್ರಿಗಸ್ ಬಿ ಕಾಪ್ 8 (14ಎ, 4x1)

ಮ್ಯಾಥ್ಯೂಸ್ ಬಿ ಕಾಪ್ 3 (10ಎ)

ಶಿವರ್ ಸಿ ಮಣಿ ಬಿ ಶ್ರೀ ಚಾರಣಿ 30 (28 ಎ, 4 x4)

ಹರ್ಮನ್ಪ್ರೀತ್ ಸಿ ಕಾಪ್ ಸದರ್ಲೆಂಡ್ 66 (44ಎ,4x9, 6x2)

ಅಮೆಲಿಯಾ ಕೆರ್ ಸಿ ಶಫಾಲಿ ಬಿ ಜೊನಾಸೆನ್ 2 (3 ಎ)

ಸಜನಾ ಎಲ್ಬಿಡಬ್ಲ್ಯು ಜೊನಾಸೆನ್ 0 (2 ಎ)

ಕಮಲಿನಿ ಸ್ಟಂಪ್ಡ್ ಬ್ರೈಸ್ ಬಿ ಶ್ರೀ ಚಾರಿಣಿ 10 ( 7 ಎ)

ಅಮನ್ಜೋತ್ ಔಟಾಗದೇ 14(7 ಎ,4x2)

ಸಂಸ್ಕೃತಿ ಔಟಾಗದೇ 8 (5ಎ, 4x1)

ಇತರೆ: (ಬೈ 1, ವೈಡ್ 7) 8

ವಿಕೆಟ್ ಪತನ: 1–5 (ಹೇಯ್ಲಿ ಮ್ಯಾಥ್ಯೂಸ್ 2.6), 2–14 (ಯಷ್ಟಿಕಾ 4.3), 3–103 (ನಾಟ್ ಶಿವರ್ ಬ್ರಂಟ್ 14.5), 4–112 (ಅಮೆಲಿಯಾ ಕೆರ್ 15.4), 5–112 (ಸಜೀವನ್ ಸಜನಾ 15.6), 6–118(ಹರ್ಮನ್ಪ್ರೀತ್ ಕೌರ್ 17.1), 7–132 (ಜಿ.ಕಮಲಿನಿ 18.4)

ಬೌಲಿಂಗ್: ಮರಿಝಾನ್ ಕಾಪ್ 4–0–11–2, ಶಿಖಾ ಪಾಂಡೆ
4–0–29–0, ಅನಾಬೆಲ್ ಸದರ್ಲೆಂಡ್ 4–0–29–1, ಜೆಸ್ ಜೊನಾಸೆನ್ 3–0–26–2, ಶ್ರೀಚಾರಿಣಿ 4–0–43–2, ಮಿನ್ನು ಮಣಿ 1–0–10–0

ಡೆಲ್ಲಿ ಕ್ಯಾಪಿಟಲ್ಸ್: 9ಕ್ಕೆ 141 (20 ಓವರ್ಗಳಲ್ಲಿ)

ಲ್ಯಾನಿಂಗ್ ಬಿ ಬ್ರಂಟ್ 13 (9ಎ, 4x2)

ಶಫಾಲಿ ಎಲ್ಬಿಡಬ್ಲ್ಯು ಬಿ ಶಬ್ನಿಂ 4 (9ಎ)

ಜೊನಾಸನ್ ಸಿ ಭಾಟಿಯಾ ಬಿ ಕೆರ್ 13 (15ಎ, 4x2)

ಜೆಮಿಮಾ ಸಿ ಮತ್ತು ಬಿ ಕೆರ್ 30 (21ಎ, 4x4)

ಅನಾಬೆಲ್ ಸ್ಟಂಪ್ ಭಾಟಿಯಾ ಬಿ ಇಶಾಕ್ 2 (5ಎ)

ಮರಿಝಾನ್ ಸಿ ಮ್ಯಾಥ್ಯೂಸ್ ಬಿ ಬ್ರಂಟ್ 40 (26ಎ, 4x5, 6x2)

ಬ್ರೈಸ್ ರನೌಟ್ (ಗುಪ್ತಾ/ಭಾಟಿಯಾ) 5 (5ಎ)

ನಿಕಿ ಪ್ರಸಾದ್ ಔಟಾಗದೇ 25 (23ಎ, 4x1, 6x1)

ಶಿಖಾ ಬಿ ಬ್ರಂಟ್ 0 (1ಎ)

ಮಿನ್ನು ಸಿ ಸಂಜನಾ ಬಿ ಮ್ಯಾಥ್ಯೂಸ್ 4 (2ಎ, 4x1)

ಶ್ರೀಚಾರಿಣಿ ಔಟಾಗದೇ 3 (4ಎ)

ಇತರೆ: 2 (ಲೆಗ್ಬೈ 1, ವೈಡ್ 1)

ವಿಕೆಟ್ ಪತನ: 1-15 (ಮೆಗ್ ಲ್ಯಾನಿಂಗ್, 1.6), 2-17 (ಶಫಾಲಿ ವರ್ಮಾ, 2.6), 3-37 (ಜೆಸ್ ಜೊನಾಸೆನ್, 6.2), 4-44 (ಅನಾಬೆಲ್ ಸದರ್ಲೆಂಡ್, 7.6), 5-66 (ಜೆಮಿಮಾ ರಾಡ್ರಿಗಸ್, 10.4), 6-83 (ಸಾರಾ ಬ್ರೈಸ್, 12.5), 7-123 (ಮಾರಿಝಾನ್ ಕಾಪ್, 17.4), 8-123 (ಶಿಖಾ ಪಾಂಡೆ, 17.5), 9-128 (ಮಿನ್ನು ಮಣಿ, 18.2)

ಬೌಲಿಂಗ್: ಶಬ್ನಿಂ ಇಸ್ಮಾಯಿಲ್ 4–0–15–1, ನಾಟ್ ಶಿವರ್ ಬ್ರಂಟ್ 4–0–30–3, ಹೇಯ್ಲಿ ಮ್ಯಾಥ್ಯೂಸ್ 4–0–37–1, ಅಮೆಲಿಯಾ ಕೆರ್ 4–0–25–2, ಶಿಖಾ ಪಾಂಡೆ 4–0–33–1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.