ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಡೋನಾ ಸಾವಿನ ಕುರಿತು ತನಿಖೆ ಆರಂಭ

Last Updated 28 ನವೆಂಬರ್ 2020, 14:13 IST
ಅಕ್ಷರ ಗಾತ್ರ

ಬ್ಯೂನಸ್‌ ಐರಿಸ್‌: ಫುಟ್‌ಬಾಲ್ ದಂತಕತೆ ಡಿಯೆಗೊ ಮರಡೋನಾ ಅವರ ಸಾವಿಗೆ ವೈದ್ಯಕೀಯ ನಿರ್ಲಕ್ಷ್ಯವೂ ಕಾರಣವಾಗಿರಬಹುದೇ ಎಂಬುದರ ಕುರಿತು ಅರ್ಜೆಂಟೀನಾದ ಅಧಿಕಾರಿಗಳು ಶುಕ್ರವಾರ ತನಿಖೆ ಆರಂಭಿಸಿದ್ದಾರೆ. ನ್ಯಾಯಾಂಗ ಮೂಲಗಳು ಈ ವಿಷಯ ತಿಳಿಸಿವೆ.

‘ಮರಡೋನಾ ಸಾವಿನಲ್ಲಿ ಅಕ್ರಮದ ಸುಳಿವು ಕಂಡುಬಂದಿದೆ‘ ಎಂದು ಮರಡೋನಾ ಕುಟುಂಬದ ಆಪ್ತ ಮೂಲಗಳು ಹೇಳಿವೆ.

‘ತರ್ತು ಕರೆ ಬಂದರೂ ಆಂಬ್ಯುಲೆನ್ಸ್‌ಗಳು ಫುಟ್‌ಬಾಲ್ ತಾರೆಯ ಮನೆಗೆ ತಲುಪಲು ಅರ್ಧ ಗಂಟೆಯಷ್ಟು ಸಮಯ ತೆಗೆದುಕೊಂಡಿವೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಬೇಕೆಂದು ಮರಾಡೋನಾ ಅವರ ವಕೀಲ ಮಥಿಯಾಸ್ ಮೊರ್ಲಾ ಅವರು ಒತ್ತಾಯಿಸಿದ್ದರು.

‘ಮರಡೋನಾ ಅವರು ಶ್ವಾಸಕೋಶದ ತೀವ್ರ ತೊಂದರೆ ಹಾಗೂ ಹೃದಯ ಸ್ಪಂದಿಸದ ಕಾರಣ ಬುಧವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ‘ ಎಂದು ಶವಪರೀಕ್ಷೆಯ ಪ್ರಾಥಮಿಕ ವರದಿ ದೃಢಪಡಿಸಿತ್ತು.

‘ಮರಡೋನಾ ಡಿಯೆಗೊ: ಸಾವಿನ ಕಾರಣ ನಿರ್ಧಾರ’ ಎಂಬ ಹೆಸರಿನಲ್ಲಿ ಕಡತ ಸೃಷ್ಟಿಸಿರುವ ಬ್ಯೂನಸ್ ಐರಿಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

‘ಮರಡೋನಾ ಅವರು ಮನೆಯಲ್ಲಿ ನಿಧನರಾದ ಕಾರಣ ಅವರ ಸಾವಿನ ಪ್ರಮಾಣಪತ್ರಕ್ಕೆ ಯಾರೂ ಸಹಿ ಹಾಕಿಲ್ಲ ಎಂಬ ಕಾರಣಕ್ಕೆ ತನಿಖೆ ಆರಂಭಿಸಲಾಗಿದೆ. ಆದರೆ ಸಾವಿನ ಕುರಿತು ಅನುಮಾನಗಳು ಅಥವಾ ಅಕ್ರಮಗಳಿವೆ ಎಂಬುದು ಇದರ ಅರ್ಥವಲ್ಲ‘ ಎಂದು ವಕೀಲರೊಬ್ಬರು ಹೇಳಿದ್ದಾರೆ.

60 ವರ್ಷದ ಮರಡೋನಾ ಅವರು ಬ್ಯೂನಸ್‌ನ ಉತ್ತರದ ಟೈಗ್ರೆ ಎಂಬಲ್ಲಿನ ಮನೆಯೊಂದರಲ್ಲಿ ವೈದ್ಯಕೀಯ ಆರೈಕೆಯನ್ನು ಪಡೆಯುತ್ತಿದ್ದರು. ನವೆಂಬರ್ ತಿಂಗಳ ಆರಂಭದಲ್ಲಿ ಮೆದುಳಿನ ಹೆಪ್ಪುಗಟ್ಟುವಿಕೆ ಸಮಸ್ಯೆಯಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಅಲ್ಲಿ ಚೇತರಿಸಿಕೊಳ್ಳುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT