ಬೆಂಗಳೂರು: ಕೊಂಕಣ್ ಎಫ್ಸಿ ತಂಡವು, ಬಿಡಿಎಫ್ಎ ‘ಸಿ’ ಡಿವಿಷನ್ ಫುಟ್ಬಾಲ್ ಲೀಗ್ನ ಪ್ರಿ–ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 4–1ರಿಂದ ಆರ್ಬಿಐ ಎಫ್ಸಿ ತಂಡವನ್ನು ಮಣಿಸಿ, ಕ್ವಾರ್ಟರ್ಫೈನಲ್ ಪ್ರವೇಶಿಸಿತು.

ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪ್ರಿ–ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ, ಪಿಳ್ಳಣ್ಣ ಗಾರ್ಡನ್ ಎಫ್ಸಿ ತಂಡವು 5–0 ಅಂತರದಿಂದ ಆಫ್ಗನ್ ಎಫ್ಸಿ ತಂಡವನ್ನು ಮಣಿಸಿ, ಕ್ವಾರ್ಟರ್ಫೈನಲ್ಗೆ ಅರ್ಹತೆ ಪಡೆಯಿತು.

ಇಂದಿರಾನಗರ ಎಫ್ಸಿ ತಂಡವು ಸಡನ್ ಡೆತ್ ಮೂಲಕ ಮಿಸಾಕಾ ಯುನೈಟೆಡ್ ತಂಡವನ್ನು ಸೋಲಿಸಿ ಹಾಗೂ ಮಹಾರಾಜ ಸೋಷಿಯಲ್ಸ್ ಎಫ್ಸಿ ತಂಡವು 5–1ರಿಂದ ಮುಸ್ಲಿಂ ಹೀರೋಸ್ ತಂಡವನ್ನು ಮಣಿಸಿ, ಕ್ವಾರ್ಟರ್ಫೈನಲ್ಗೆ ಪ್ರವೇಶಿಸಿದವು.

ಕೊಂಕಣ್ ಎಫ್ಸಿ ತಂಡದ ನೋಯಲ್ (25+1ನೇ ನಿ.) ಹಾಗೂ ಗೋವಿಂದರಾಜ್ (33ನೇ ಹಾಗೂ 41ನೇ ನಿ.) ಗೋಲು ಗಳಿಸಿ ಮಿಂಚಿದರು. ಆರ್ಬಿಐ ಎಫ್ಸಿ ತಂಡದ ಚಿರಂಜೀವಿ ಜಿ.ಎಸ್. (16ನೇ ನಿ.) ಏಕೈಕ ಗೋಲು ಹೊಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.