ಸೋಲು ತಪ್ಪಿಸಿದ ಮೆಸ್ಸಿ ಗೋಲು

ಮಂಗಳವಾರ, ಜೂಲೈ 16, 2019
23 °C
ಕೊಪಾ ಅಮೆರಿಕಾ ಫುಟ್‌ಬಾಲ್‌ ಟೂರ್ನಿ: ಪರಾಗ್ವೆ ವಿರುದ್ಧ ಡ್ರಾ ಸಾಧಿಸಿದ ಅರ್ಜೆಂಟೀನಾ

ಸೋಲು ತಪ್ಪಿಸಿದ ಮೆಸ್ಸಿ ಗೋಲು

Published:
Updated:
Prajavani

ಬೆಲೊ ಹಾರಿಜೊಂಟ್‌, ಬ್ರೆಜಿಲ್‌: ತಾರಾ ಆಟಗಾರ ಲಯೊನೆಲ್‌ ಮೆಸ್ಸಿ ಪೆನಾಲ್ಟಿಯಲ್ಲಿ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಅರ್ಜೆಂಟೀನಾ ತಂಡ ಪರಾಗ್ವೆ ವಿರುದ್ಧ ಡ್ರಾ ಸಾಧಿಸಿತು. ಎರಡು ಬಾರಿಯ ವಿಶ್ವಚಾಂಪಿಯನ್‌ ತಂಡ ಕೋಪಾ ಅಮೆರಿಕಾ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಸೋಲಿನ ಭೀತಿಯಿಂದ ಪಾರಾಯಿತು.

ಮೆಸ್ಸಿ ಪಂದ್ಯದ 57ನೇ ನಿಮಿಷದಲ್ಲಿ ಸ್ಪಾಟ್‌ ಕಿಕ್‌ ಮೂಲಕ ಇಲ್ಲಿನ ಮಿನೆರೊ ಕ್ರೀಡಾಂಗಣದಲ್ಲಿ ಮೋಡಿ ಮಾಡಿದರು. ಪಂದ್ಯದ ಪ್ರಥಮಾರ್ಧದಲ್ಲಿಯೇ ಗೋಲು (37ನೇ ನಿಮಿಷ) ಗಳಿಸಿದ್ದ ಪರಾಗ್ವೆಯ ರಿಚರ್ಡ್‌ ಸ್ಯಾಂಚೆಜ್‌ ತಮ್ಮ ತಂಡಕ್ಕೆ ಮುನ್ನಡೆ ಒದಗಿಸಿದ್ದರು.

ದ್ವಿತೀಯಾರ್ಧದಲ್ಲಿ ಪರಾಗ್ವೆಗೆ ಪೆನಾಲ್ಟಿಯಲ್ಲಿ ಗೋಲು ಗಳಿಸಿವ ಅವಕಾಶ ಒದಗಿತ್ತು. ಆದರೆ ಅರ್ಜೆಂಟೀನಾದ ಗೋಲುಕೀಪರ್‌ ಫ್ರಾಂಕೊ ಅರ್ಮಾನಿ ಅದನ್ನು ಯಶಸ್ವಿಯಾಗಿ ತಡೆಯುವ ಮೂಲಕ ಪರಾಗ್ವೆಗೆ ಅಡ್ಡಗಾಲಾದರು.

ಈ ಡ್ರಾನೊಂದಿಗೆ ಎರಡು ಪಂದ್ಯಗಳ ಮೂಲಕ ಒಂದು ಪಾಯಿಂಟ್‌ ಕಲೆಹಾಕಿರುವ ಅರ್ಜೆಂಟೀನಾ ‘ಬಿ’ ಗುಂಪಿನ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಅದಾಗ್ಯೂ ಉತ್ತಮ ರೇಟಿಂಗ್‌ನೊಂದಿಗೆ ಮೂರನೇ ಸ್ಥಾನ ಪಡೆಯುವ ಎರಡು ತಂಡಗಳಿಗೆ ಕ್ವಾರ್ಟರ್‌ಫೈನಲ್‌ ತಲುಪುವ ಅವಕಾಶವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !