ನವದೆಹಲಿ: ಸ್ಪೇನ್ ದೇಶದ ಫುಟ್‌ಬಾಲ್ ತಂಡವೊಂದರ ತರಬೇತುದಾರ ಫ್ರಾನ್ಸಿಸ್ಕೊ ಗಾರ್ಸಿಯಾ ಅವರು ಕೋವಿಡ್–19ನಿಂದಾಗಿ ಮೃತಪಟ್ಟಿದ್ದಾರೆ. ಅವರಿಗೆ ಕೇವಲ21 ವರ್ಷ ವಯಸ್ಸಾಗಿತ್ತು.

ಅಥ್ಲೆಟಿಕೊ ಪೋರ್ಟಾಡಾ ಆಲ್ಟಾಯುವ ತಂಡದ ವ್ಯವಸ್ಥಾಪಕರಾಗಿ 2016ರಿಂದ ಕಾರ್ಯ ನಿರ್ವಹಿಸಿದ್ದ ಅವರು, ಇಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟಿ ಅತಿ ಕಿರಿಯ ವ್ಯಕ್ತಿ ಎಂದು ಗೋಲ್.ಕಾಮ್ ವರದಿ ಮಾಡಿದೆ.

ಈ ಸಂಬಂಧಅಥ್ಲೆಟಿಕೊ ಪೋರ್ಟಾಡಾ ಆಲ್ಟಾ ಪ್ರಕಟಣೆ ಹೊರಡಿಸಿದ್ದು, ಅದರಲ್ಲಿ, ‘ನಮ್ಮನ್ನುಅಗಲಿರುವ ಕೋಚ್‌ಫ್ರಾನ್ಸಿಸ್ಕೊ ಗಾರ್ಸಿಯಾಅವರ ಕುಟುಂಬ, ಸ್ನೇಹಿತರ ಪರವಾಗಿ ತೀವ್ರ ಸಂತಾಪ ಸೂಚಿಸುತ್ತೇವೆ. ಇದು ದುರದೃಷ್ಟಕರ’ಭಾವುಕವಾಗಿ ಹೇಳಿದೆ.

‘ಈಗ ನೀವಿಲ್ಲದೆ ನಾವು ಏನು ಮಾಡಲು ಸಾಧ್ಯ ಫ್ರಾನ್ಸಿಸ್? ಪೋರ್ಟಾಡಾ ಇರಲಿ ಮತ್ತೊಂದು ತಂಡವೇ ಇರಲಿ,ನೀವು ಯಾವಾಗಲೂ ನಮ್ಮೊಂದಿಗೆ ಇರುತ್ತಿದ್ದಿರಿ. ನಿಮ್ಮ ನೆರವಿಲ್ಲದೆ ಲೀಗ್‌ನ ಅಷ್ಟು ದೂರವನ್ನು ನಾವು ಹೇಗೆ ಕ್ರಮಿಸಲು ಸಾಧ್ಯ? ನಮಗೆ ಏನೊಂದೂ ತೋಚುತ್ತಿಲ್ಲ. ಆದರೆ, ಖಂಡಿತಾ ನಿಮಗಾಗಿ ಅದನ್ನು ಸಾಧಿಸುತ್ತೇವೆ. ನಾವು ನಿಮ್ಮನ್ನು ಮರೆಯುವುದಿಲ್ಲ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ’ ಎಂದುಬರೆಯಲಾಗಿದೆ.

ಜಗತ್ತಿನಾದ್ಯಂತ ಸುಮಾರು 1.7 ಲಕ್ಷ ಜನರಲ್ಲಿಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದು, ಇದರಿಂದಾಗಿ 7,174 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.ಭಾರತದಲ್ಲಿ ಇದುವರೆಗೆ ಮೂವರು ಸಾವನ್ನಪ್ಪಿದ್ದು, 127 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.