ಬುಧವಾರ, ಜೂನ್ 29, 2022
25 °C

ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್‌: ಗೋವಾಗೆ ತವರಿನಲ್ಲಿ ಜಯದ ತವಕ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ಗೋವಾ: ಚಾಂಪಿಯನರನ್ನು ಮಣಿಸಿ ಭರವಸೆಯಲ್ಲಿರುವ ಎಫ್‌ಸಿ ಗೋವಾ ತಂಡದವರು ಇಂಡಿಯನ್ ಸೂಪರ್ ಲೀಗ್‌ನ (ಐಎಸ್‌ಎಲ್‌) ಬುಧವಾರದ ಪಂದ್ಯದಲ್ಲಿ ಜಯ ಗಳಿಸುವ ತವಕದಲ್ಲಿದ್ದಾರೆ. ಇಲ್ಲಿನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಈ ತಂಡಕ್ಕೆ ಮುಂಬೈ ಸಿಟಿ ಎಫ್‌ಸಿ ಎದುರಾಳಿ.

ಆಡಿರುವ ಎರಡು ಪಂದ್ಯಗಳ ಪೈಕಿ ಒಂದು ಜಯ ಮತ್ತು ಒಂದು ಡ್ರಾ ಸಾಧಿಸಿರುವ ಗೋವಾ ತಂಡದ ಬಳಿ ಈಗ ನಾಲ್ಕು ಪಾಯಿಂಟ್‌ಗಳಿವೆ. ಈ ಬಾರಿಯ ಮೊದಲ ಪಂದ್ಯದಲ್ಲಿ ನಾರ್ತ್ ಈಸ್ಟ್‌ ಯುನೈಟೆಡ್ ಜೊತೆ 2–2ರಲ್ಲಿ ಡ್ರಾ ಸಾಧಿಸಿದ್ದ ತಂಡ ನಂತರ ಚೆನ್ನೈಯಿನ್ ಎಫ್‌ಸಿಯನ್ನು 3–1ರಿಂದ ಮಣಿಸಿತ್ತು. ಕಳೆದ ಬಾರಿ ತಂಡದ ಪ್ರಮುಖ ಆಟಗಾರನಾಗಿದ್ದ ಮೆನ್ವೆಲ್ ಲಾಂಜೆರೊಟ್‌ ಈ ಬಾರಿ ಎಟಿಕೆ ಪರ ಆಡುತ್ತಿದ್ದಾರೆ. ಆದರೂ ಗೋವಾದ ಫಾರ್ವರ್ಡ್‌ ವಿಭಾಗದ ಶಕ್ತಿ ಕುಂದಲಿಲ್ಲ. ಕಳೆದ ಬಾರಿ ಚಿನ್ನದ ಶೂ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದ ಫರ್ಹಾನ್‌ ಕೊರೊಮಿನಸ್ ಎರಡು ಪಂದ್ಯಗಳಿಂದ ಮೂರು ಗೋಲು ಗಳಿಸಿ ಆತ್ಮವಿಶ್ವಾಸದಲ್ಲಿದ್ದಾರೆ.

ವಿಶ್ವಾಸದಲ್ಲಿ ಮುಂಬೈ: ಮುಂಬೈ ಸಿಟಿ ತಂಡವೂ ಈಗ ಗೆಲುವಿನ ವಿಶ್ವಾಸದಲ್ಲಿದೆ. ಕಳೆದ ಪಂದ್ಯದಲ್ಲಿ ಪುಣೆ ಸಿಟಿಯನ್ನು 2–0ಯಿಂದ ಮಣಿಸಿರುವುದು ಇದಕ್ಕೆ ಕಾರಣ. ಮೊದಲ ಪಂದ್ಯದಲ್ಲಿ ಜಮ್‌ಶೆಡ್‌ಪುರ ಎಫ್‌ಸಿ ವಿರುದ್ಧ ಸೋತ ನಂತರ ಕೇರಳ ಬ್ಲಾಸ್ಟರ್ಸ್‌ ಎದುರು 1–1ರಿಂದ ಡ್ರಾ ಸಾಧಿಸಿತ್ತು. ಮೂರನೇ ಪಂದ್ಯದಲ್ಲಿ ಗೆದ್ದು ನೈಜ ಸಾಮರ್ಥ್ಯವನ್ನು ತೋರಿತ್ತು.

‘ಗೋವಾ, ಉತ್ತಮ ತಂಡ. ಅದರ ಕೋಚ್ ಕೂಡ ತಂತ್ರಶಾಲಿಯಾಗಿದ್ದಾರೆ. ಆದರೂ ನಮ್ಮ ಆಟಗಾರರು ಭರವಸೆಯಲ್ಲಿದ್ದಾರೆ’ ಎಂದು ಮುಂಬೈ ತಂಡದ ಕೋಚ್‌ ಜಾರ್ಜ್‌ ಕೋಸ್ಟಾ ಹೇಳಿದರು.

‘ನಮ್ಮ ಆಟಗಾರರು ನಾಳೆಯೂ ಆಕ್ರಮಣಕಾರಿ ಆಟವಾಡಲಿದ್ದಾರೆ. ಎದುರಾಳಿ ತಂಡಕ್ಕೆ ಗೋಲು ಬಿಟ್ಟುಕೊಡಬಾರದು ಎಂಬುದು ತಂಡದ ಪ್ರಮುಖ ನೀತಿ’ ಎಂದು ಗೋವಾ ತಂಡದ ಕೋಚ್‌ ಸರ್ಜಿಯೊ ಲೊಬೆರಾ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು