ಬುಧವಾರ, ಡಿಸೆಂಬರ್ 2, 2020
25 °C

ಕ್ರೀಡಾ ಚಟುವಟಿಕೆ ಆರಂಭ: ನೀತಾ ಅಂಬಾನಿ ಸ್ವಾಗತ

ಪಿಟಿಐ Updated:

ಅಕ್ಷರ ಗಾತ್ರ : | |

ನೀತಾ ಅಂಬಾನಿ

ಬಾಂಬೊಲಿಮ್‌ : ಕೋವಿಡ್‌–19 ಪಿಡುಗಿನ ನಡುವೆಯೂ ದೇಶದಲ್ಲಿ ಕ್ರೀಡಾ ಚಟುವಟಿಕೆಗಳು ಪುನರಾರಂಭವಾಗಿದ್ದನ್ನು ಫುಟ್‌ಬಾಲ್‌ ಸ್ಪೋರ್ಟ್ಸ್ ಡೆವಲಪ್‌ಮೆಂಟ್‌ ಲಿಮಿಟೆಡ್‌ನ (ಎಫ್‌ಎಸ್‌ಡಿಎಲ್‌) ಮುಖ್ಯಸ್ಥೆ ನೀತಾ ಅಂಬಾನಿ ಸ್ವಾಗತಿಸಿದ್ದಾರೆ. ಫುಟ್‌ಬಾಲ್‌ ಟೂರ್ನಿಗಳ ಪುನರಾರಂಭದಲ್ಲಿ ಬಹಳಷ್ಟು ಸ್ಥೈರ್ಯದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯು ಶುಕ್ರವಾರ ಕೇರಳ ಬ್ಲಾಸ್ಟರ್ಸ್ ಹಾಗೂ ಎಟಿಕೆ ಮೋಹನ್‌ ಬಾಗನ್‌ ತಂಡಗಳ ನಡುವಿನ ಪಂದ್ಯದೊಂದಿಗೆ ಆರಂಭವಾಯಿತು. ಭಾರತದ ನೆಲದಲ್ಲಿ ಕೋವಿಡ್‌ ಕಾಲದಲ್ಲಿ ಆರಂಭಗೊಂಡ ಮೊದಲ ಪ್ರಮುಖ ಟೂರ್ನಿ ಎನಿಸಿಕೊಂಡಿತು.

‘ಐಎಸ್‌ಎಲ್‌ ಟೂರ್ನಿಯು ಕೋವಿಡ್‌ನಿಂದ ನಲುಗಿದ ಮನಸ್ಸುಗಳಿಗೆ ಮುಂದಿನ ನಾಲ್ಕು ತಿಂಗಳು ಸಂತಸವನ್ನು ಹಂಚಲಿದೆ‘ ಎಂದು ನೀತಾ ಹೇಳಿದ್ದಾರೆ.

’2020–21ರ ಆವೃತ್ತಿಯು ಎರಡು ಐತಿಹಾಸಿಕ ಕ್ಲಬ್‌ಗಳು (ಮೋಹನ್‌ ಬಾಗನ್‌ ಹಾಗೂ ಈಸ್ಟ್ ಬೆಂಗಾಲ್) ಸೇರ್ಪಡೆಯಾಗುವುದರೊಂದಿಗೆ ಅತ್ಯಂತ ರೋಮಾಂಚನಕಾರಿಯಾಗಿ ಋತುವಾಗಿ ಪರಿಣಮಿಸಿದೆ‘ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು