ಶನಿವಾರ, ಆಗಸ್ಟ್ 13, 2022
23 °C

ಐಎಸ್‌ಎಲ್: ಬಿಎಫ್‌ಸಿಗೆ ಮತ್ತೊಂದು ಡ್ರಾ ಪಂದ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಫತೋರ್ಡಾ: ನಾರ್ತ್‌ ಈಸ್ಟ್ ಯುನೈ ಟೆಡ್ ತಂಡದ ಲೂಯಿಸ್ ಮಚಾದೊ ಅವರಿಂದಾಗಿ ಬೆಂಗಳೂರು ಫುಟ್‌ಬಾಲ್ ಕ್ಲಬ್‌ ತಂಡ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಮೂರನೇ ಡ್ರಾಗೆ ಸಮಾಧಾನಪಟ್ಟುಕೊಳ್ಳಬೇಕಾ ಯಿತು. ಮಂಗಳವಾರ ಇಲ್ಲಿ ನಡೆದ ಪಂದ್ಯವು 2–2ರಿಂದ ಸಮವಾಯಿತು.

ಸುನಿಲ್ ಚೆಟ್ರಿ ಬಳಗ ಆರಂಭ ದಿಂದಲೂ ಉತ್ತಮವಾಗಿ ಆಡಿತು. ಆದರೆ ನಾಲ್ಕನೇ ನಿಮಿಷದಲ್ಲಿ ನಾರ್ತ್‌ ಈಸ್ಟ್‌ ಗೋಲಿನ ಖಾತೆ ತೆರೆಯಿತು.

ಹತ್ತು ನಿಮಿಷಗಳ ನಂತರ ಬಿಎಫ್‌ಸಿಯ ಯುವಾನನ್ ತಿರುಗೇಟು ನೀಡಿದರು. 70ನೇ ನಿಮಿಷದಲ್ಲಿ ಉದಾಂತ ಸಿಂಗ್  ಬಿಎಫ್‌ಸಿಯ ಮುನ್ನಡೆ ಹೆಚ್ಚಿಸಿದರು.  78ನೇ ನಿಮಿಷದಲ್ಲಿ ಮಚಾದೊ ಬಿಎಫ್‌ಸಿಯಿಂದ ಜಯದ ಅವಕಾಶ ಕಿತ್ತುಕೊಂಡಿತು.

ಮುಂಬೈ–ಚೆನ್ನೈಯಿನ್ ಹಣಾಹಣಿ: ಬುಧವಾರ ಬ್ಯಾಂಬೋಲಿಮ್‌ನಲ್ಲಿ ನಡೆ ಯಲಿರುವ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ಮತ್ತು ಚೆನ್ನೈಯಿನ್ ಎಫ್‌ಸಿ ತಂಡಗಳು ಸೆಣಸಲಿವೆ.

ಆರಂಭ: ಸಂಜೆ 7.30

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು