ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಕ್ಸಿಕೊ ತಂಡಕ್ಕೆ ಭರ್ಜರಿ ಜಯದ ಕನಸು

Last Updated 22 ಜೂನ್ 2018, 17:49 IST
ಅಕ್ಷರ ಗಾತ್ರ

ರೊಸ್ಟೊವ್‌: ಹಾಲಿ ಚಾಂಪಿಯನ್‌ ಜರ್ಮನಿ ವಿರುದ್ಧ ಅಮೋಘ ಜಯ ಸಾಧಿಸಿ ಭರವಸೆಯಲ್ಲಿರುವ ಮೆಕ್ಸಿಕೊ ಮತ್ತೊಂದು ಭರ್ಜರಿ ಜಯದ ಕನಸಿನೊಂದಿಗೆ ಶನಿವಾರ ಅಂಗಣಕ್ಕೆ ಇಳಿಯಲಿದೆ.

ರೊಸ್ಟೊವ್‌ ಅರೆನಾದಲ್ಲಿ ನಡೆಯಲಿರುವ ‘ಎಫ್‌’ ಗುಂಪಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾವನ್ನು ಮೆಕ್ಸಿಕೊ ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದು 16ರ ಘಟ್ಟಕ್ಕೆ ಏರುವುದು ಮೆಕ್ಸಿಕೊ ಗುರಿಯಾಗಿದ್ದರೆ ಸ್ವೀಡನ್‌ ವಿರುದ್ಧ 0–1ರಿಂದ ಸೋತಿರುವ ಕೊರಿಯಾ ಗೆಲುವಿನೊಂದಿಗೆ ಮುನ್ನಡೆಯಲು ಪ್ರಯತ್ನಿಸಲಿದೆ.

1998ರ ನಂತರ ಮೊದಲ ಬಾರಿ ವಿಶ್ವಕಪ್‌ನಲ್ಲಿ ಕಣಕ್ಕೆ ಇಳಿದಿದ್ದ ಕೊರಿಯಾ ತಂಡಕ್ಕೆ ಸ್ವೀಡನ್ ವಿರುದ್ಧ ಒಂದು ಬಾರಿ ಕೂಡ ಚೆಂಡನ್ನು ಗುರಿಯತ್ತ ಒದೆಯಲು ಆಗಲಿಲ್ಲ. ಹೀಗಾಗಿ ಮೆಕ್ಸಿಕೊ ಎದುರಿನ ಪಂದ್ಯದಲ್ಲಿ ಈ ತಂಡ ಆತಂಕದಿಂದಲೇ ಕಣಕ್ಕೆ ಇಳಿಯಲಿದೆ. ಜರ್ಮನಿ ಎದುರು ಮೆಕ್ಸಿಕೊ ಆಡಿದ ರೀತಿ ಕೊರಿಯಾದ ಆತಂಕವನ್ನು ಹೆಚ್ಚಿಸಿದೆ.

ಪಾರ್ಕ್‌ ಜೂ ಹಾವೊಗೆ ಗಾಯ
ವಿಶ್ವಕಪ್‌ನಲ್ಲಿ ಒಟ್ಟು ಏಳು ಪಂದ್ಯಗಳನ್ನು ಆಡಿರುವ ಕೊರಿಯಾ ಸತತ ಮೂರು ಪಂದ್ಯ ಸೇರಿದಂತೆ ಐದರಲ್ಲಿ ಸೋತಿದೆ. ಕಳೆದ ಬಾರಿ ಒಂದು ಪಂದ್ಯವನ್ನು ಕೂಡ ಗೆಲ್ಲಲು ಈ ತಂಡಕ್ಕೆ ಆಗಲಿಲ್ಲ. ಇದೇ ರೀತಿಯ ಫಲಿತಾಂಶ ಪುನರಾವರ್ತಿಸದೇ ಇರಲು ಈ ಬಾರಿ ತಂಡ ಪ್ರಯತ್ನಿಸಲಿದೆ.

ಗಾಯಗೊಂಡಿರುವ ಪಾರ್ಕ್‌ ಜೂ ಹವೊ ಅವರು ಈ ಪಂದ್ಯದಲ್ಲಿ ಆಡುವುದು ಸಂದೇಹ. ಅವರ ಬದಲಿಗೆ ಕಿಮ್ ಮಿನ್ ವೂ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಕೀ ಸಾಂಗ್ ಯೆಂಗ್‌ ತಮ್ಮ 104ನೇ ಪಂದ್ಯ ಆಡಲು ಸಜ್ಜಾಗಿದ್ದಾರೆ. ಆದರೆ ಜುವಾನ್ ಕಾರ್ಲೋಸ್‌ ಒಸೊರಿಯೊ ಅವರಂಥ ಪ್ರತಿಭಾವಂತ ಆಟಗಾರರನ್ನು ನಿಯಂತ್ರಿಸುವುದು ಕೊರಿಯಾಗೆ ಸವಾಲಾಗಲಿದೆ.

ಮೆಕ್ಸಿಕೊ ಕಳೆದ ಪಂದ್ಯದಲ್ಲಿ ಆಡಿದ ತಂಡದಲ್ಲಿ ಬದಲಾವಣೆ ಮಾಡುವ ಸಾಧ್ಯತೆಗಳಿಲ್ಲ. ಜೇವಿಯರ್ ಹೆರ್ನಾಂಡೆಜ್‌ ಅವರು ಗೋಲು ಗಳಿಕೆಯಲ್ಲಿ ಅರ್ಧಶತಕ ದಾಖಲಿಸಲು ಇನ್ನು ಒಂದು ಗೋಲಿನ ಅಗತ್ಯವಿದ್ದು ಈ ಪಂದ್ಯದಲ್ಲಿ ಈ ಸಾಧನೆ ಮಾಡಲು ಪ್ರಯತ್ನಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT