ಶನಿವಾರ, ಅಕ್ಟೋಬರ್ 8, 2022
21 °C

ಫುಟ್‌ಬಾಲ್‌: ಕಿಕ್‌ಸ್ಟಾರ್ಟ್‌ಗೆ ಭರ್ಜರಿ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸೋನಿಯಾ ಮರಾಕ್‌ ಮತ್ತು ಕವಿಯಾ ಫಕೀರಸ್ವಾಮಿ ಗಳಿಸಿದ ಹ್ಯಾಟ್ರಿಕ್ ಗೋಲುಗಳ ಬಲದಿಂದ ಕಿಕ್‌ಸ್ಟಾರ್ಟ್‌ ಎಫ್‌ಸಿ ತಂಡವು ಕೆಎಸ್‌ಎಫ್‌ಎ ಕರ್ನಾಟಕ ವಿಮೆನ್ಸ್ ಲೀಗ್‌ ಫುಟ್‌ಬಾಲ್ ಟೂರ್ನಿಯಲ್ಲಿ ಭರ್ಜರಿ ಜಯ ಗಳಿಸಿತು.

ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ಕಿಕ್‌ಸ್ಟಾರ್ಟ್‌ 9–0ಯಿಂದ ರೆಬೆಲ್ಸ್ ಎಫ್‌ಸಿ ಎದುರು ಗೆದ್ದಿತು. ಸೋನಿಯಾ 34, 41 ಮತ್ತು 76ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. ಕವಿಯಾ 15, 36 ಮತ್ತು 60ನೇ ನಿಮಿಷಗಳಲ್ಲಿ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರು. ವಿಜೇತ ತಂಡದ ತಾನಿಯಾ ಕಾಂತಿ (78ನೇ ನಿ.), ಪ್ರಿಯಾ ತಮಾಂಗ್‌ (82ನೇ ನಿ.) ಮತ್ತು ಸುಸ್ಮಿತಾ ಲೇಪ್ಚಾ (84ನೇ ನಿ.) ಗೋಲು ದಾಖಲಿಸಿದರು.

ಇನ್ನುಳಿದ ಪಂದ್ಯಗಳಲ್ಲಿ ಮಾಡರ್ನ್‌ ಗರ್ಲ್ಸ್ 2–0ಯಿಂದ ಮಿಸಾಕ ಎಫ್‌ಸಿ ಎದುರು, ಪರಿಕ್ರಮ ಎಫ್‌ಸಿ 2–1ರಿಂದ ಪಿಂಕ್ ಪ್ಯಾಂಥರ್ಸ್ ವಿರುದ್ಧ ಜಯ ಗಳಿಸಿದವು.

ಟೂರ್ನಿಗೆ ಶನಿವಾರ ಮತ್ತು ಭಾನುವಾರ ವಿರಾಮದ ದಿನಗಳಾಗಿವೆ. ಸೋಮವಾರ ನಡೆಯುವ ಪಂದ್ಯಗಳಲ್ಲಿ ರೂಟ್ಸ್ ಎಫ್‌ಸಿ– ಕೆಂಪ್‌ ಎಫ್‌ಸಿ, ಪರಿಕ್ರಮ– ಮಾತೃ ಪ್ರತಿಷ್ಠಾನ, ಮಿಸಾಕ ಯುನೈಟೆಡ್‌– ಪಿಂಕ್ ಪ್ಯಾಂಥರ್ಸ್ ಸೆಣಸಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು