ಮಂಗಳವಾರ, ಫೆಬ್ರವರಿ 18, 2020
24 °C

ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿ: ಜೆಮ್‌ಶೆಡ್‌ಪುರಕ್ಕೆ ಹೋರಾಟದ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮ್‌ಶೆಡ್‌ಪುರ: ಆತಿಥೇಯ ಜೆಮ್‌ಶೆಡ್‌ಪುರ ತಂಡ ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಭಾನುವಾರ 3–2 ಗೋಲುಗಳಿಂದ ಕೇರಳ ಬ್ಲಾಸ್ಟರ್ಸ್‌ ತಂಡದ ಮೇಲೆ ಜಯಗಳಿಸಿತು.

ಪಂದ್ಯದ 86ನೇ ನಿಮಿಷ ಕೇರಳ ಬ್ಲಾಸ್ಟರ್ಸ್‌ನ ಬಾರ್ತಲೋಮಿಯೊ ಒಗ್ಬೇಚೆ ಅವರ ಉಡುಗೋರೆ ಗೋಲು ಜೆಮ್‌ಶೆಡ್‌ಪುರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಪಂದ್ಯದಲ್ಲಿ ಎರಡು ಬಾರಿ ಹಿಂದೆಯಿದ್ದರೂ ಅಂತಿಮವಾಗಿ ರೋಚಕ ಗೆಲುವು ಸಾಧಿಸಲು ಈ ಗೋಲು ನೆರವಾಯಿತು.

ನೊ ಅಕೋಸ್ಟಾ (39ನೇ ನಿಮಿಷ), ಸೆರ್ಜಿಯೊ ಕ್ಯಾಸೆಲ್‌ (75ನೇ) ಜೆಎಫ್‌ಸಿ ತಂಡದ ಇನ್ನೆರಡು ಗೋಲುಗಳನ್ನು ಗಳಿಸಿದ್ದರು. ಕೇರಳ ಪರ ಮೆಸ್ಸಿ ಬೌಲಿ (11ನೇ ನಿಮಿಷ) ಮೊದಲ ಗೋಲು ಗಳಿಸಿದರು. ಸ್ವಂತ ತಂಡಕ್ಕೆ ‘ಖಳ’ನಾಗುವ ಮೊದಲು ಒಗ್ಬೇಚೆ ತಮ್ಮ ತಂಡಕ್ಕೆ 2ನೇ ಗೋಲು ತಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು