ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗಣಕ್ಕೆ ನುಗ್ಗಿದ ವ್ಯಕ್ತಿ ವಿರುದ್ಧ ಪ್ರಕರಣ

ಲಾಲಿಗಾ ಟೂರ್ನಿ: ಬಾರ್ಸಿಲೋನಾ ಗೆಲುವಿನಲ್ಲಿ ಮಿಂಚಿದ ಮೆಸ್ಸಿ
Last Updated 14 ಜೂನ್ 2020, 21:15 IST
ಅಕ್ಷರ ಗಾತ್ರ

ಮ್ಯಾಡ್ರಿಡ್ (ಎಪಿ/ಎಎಫ್‌ಪಿ): ಪಂದ್ಯದ ವೇಳೆ ಅಂಗಣಕ್ಕೆ ನುಗ್ಗಿದ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಲಾಲಿಗಾ ನಿರ್ಧರಿಸಿದೆ. ಪ್ರೇಕ್ಷಕರಿಗೆ ಅವಕಾಶ ನೀಡದೆ ಶನಿವಾರ ನಡೆದ ಬಾರ್ಸಿಲೋನಾ ಮತ್ತು ರಿಯಲ್ ಮಲೋರ್ಕಾ ಪಂದ್ಯದ ವೇಳೆ ಘಟನೆ ನಡೆದಿತ್ತು.

ಲಯೊನೆಲ್ ಮೆಸ್ಸಿ ಗಳಿಸಿದ ಗೋಲಿನ ಮೂಲಕ ಬಾರ್ಸಿಲೋನಾ 4–0ಯಿಂದ ಈ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು. 52ನೇ ನಿಮಿಷದಲ್ಲಿ ಮೆಸ್ಸಿ ಹೆಸರು ಬರೆದಿರುವ, ಅರ್ಜೆಂಟೀನಾ ಜೆರ್ಸಿಯನ್ನು ಹೋಲುವ ಟಿ–ಶರ್ಟ್ ತೊಟ್ಟು ವ್ಯಕ್ತಿ ಅಂಗಣಕ್ಕೆ ನುಗ್ಗಿ ಸೆಲ್ಫಿ ತೆಗೆಯಲು ಪ್ರಯತ್ನಿಸಿದ್ದ.

ಮಾಸ್ಕ್‌ ಮತ್ತು ಕೈಗವಸು ತೊಟ್ಟುಕೊಂಡಿಲ್ಲದ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ಅಟ್ಟಾಡಿಸಿ ಹಿಡಿದಿದ್ದರು. ಆಟಗಾರರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಕಠಿಣ ಕ್ರಮಗಳನ್ನು ಕೈಗೊಂಡಿದ್ದ ಲಾಲಿಗಾ ಆಡಳಿತ 300ಕ್ಕೂ ಕಡಿಮೆ ಜನರಿಗೆ ಮಾತ್ರ ಕ್ರೀಡಾಂಗಣದ ಒಳಗೆ ಹೋಗಲು ಅವಕಾಶ ನೀಡಿತ್ತು.

ಮಿಂಚಿದ ಲಯೊನೆಲ್ ಮೆಸ್ಸಿ: ಕೊರೊನಾ ಹಾವಳಿಯಿಂದಾಗಿ ಮೂರು ತಿಂಗಳಿಂದ ಸ್ಪರ್ಧಾತ್ಮಕ ಫುಟ್‌ಬಾಲ್‌ನಲ್ಲಿ ಕಣಕ್ಕೆ ಇಳಿಯದೇ ಇದ್ದ ಲಯೊನೆಲ್ ಮೆಸ್ಸಿ ಶನಿವಾರ ರಾತ್ರಿ ಮಿಂಚಿದರು. ಒಂದು ಗೋಲು ಗಳಿಸಿದ ಅವರು ಎರಡು ಗೋಲು ಹೊಡೆಯಲು ಸಹ ಆಟಗಾರರಿಗೆ ನೆರವಾದರು. ಇದರ ಪರಿಣಾಮ ಬಾರ್ಸಿಲೋನಾ ತಂಡ ಭರ್ಜರಿ ಗೆಲುವು ಸಾಧಿಸಿತು.

ಪಂದ್ಯದ ಎಡಡನೇ ನಿಮಿಷದಲ್ಲಿ ಮೋಹಕ ಹೆಡರ್ ಮೂಲಕ ಚಿಲಿಯ ಮಿಡ್‌ಫೀಲ್ಡರ್ ಆರ್ತುರೊ ವೈಡಲ್ ಮೊದಲ ಗೋಲು ತಂದಿತ್ತರು. ಮೊದ ಲಾರ್ಧದ ಮುಕ್ತಾಯಕ್ಕೆ ಕೆಲವೇ ನಿಮಿಷಗಳು ಇರುವಾಗ ಡೆನ್ಮಾರ್ಕ್‌ನ ಮಾರ್ಟಿನ್ ಬ್ರಾಥ್‌ವೇಟ್ ಚೆಂಡನ್ನು ಗುರಿ ಮುಟ್ಟಿಸಿ ಮುನ್ನಡೆ ಹೆಚ್ಚಿಸಿದರು. ಇವರಿಬ್ಬರೂ ಅಂತರ ಕಾಯ್ದುಕೊಳ್ಳುವ ನಿಬಂಧನೆಗಳನ್ನು ಉಲ್ಲಂಘಿಸಿ ಪರಸ್ಪರ ಅಪ್ಪಿಕೊಂಡು ಸಂಭ್ರಮಿಸಿದರು.

79ನೇ ನಿಮಿಷದಲ್ಲಿ ಜೋರ್ಡಿ ಆಲ್ಬಾ ಗಳಿಸಿದ ಗೋಲಿನ ಮೂಲಕ ತಂಡ ಸುಲಭ ಗೆಲುವಿನತ್ತ ಹೆಜ್ಜೆ ಹಾಕಿತು. ಕೊನೆಯ ನಿಮಿಷದಲ್ಲಿ ಎದುರಾಳಿ ತಂಡದ ರಕ್ಷಣಾ ವಿಭಾ ಗದ ನಾಲ್ವರನ್ನು ವಂಚಿಸಿ ಮೆಸ್ಸಿ ಗೋಲು ಗಳಿಸಿದರು. ಬ್ರಾಥ್‌ವೇಟ್ ಮತ್ತು ಜೋರ್ಡಿ ಗಳಿಸಿದ ಗೋಲಿಗೆ ಮೆಸ್ಸಿ ನೆರವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT