ಗುರುವಾರ , ಮಾರ್ಚ್ 23, 2023
30 °C

The Best FIFA Men's Player: ಮೆಸ್ಸಿ, ಎಂಬಾಪೆ ನಾಮನಿರ್ದೇಶನ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: 2022ನೇ ಸಾಲಿನ ಫುಟ್‌ಬಾಲ್ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡದ ನಾಯಕ ಲಯೊನೆಲ್ ಮೆಸ್ಸಿ ಮತ್ತು ರನ್ನರ್-ಅಪ್ ಫ್ರಾನ್ಸ್‌ನ ಕಿಲಿಯಾನ್ ಎಂಬಾಪೆ, ಫಿಫಾದ ಅತ್ಯುತ್ತಮ ಆಟಗಾರ ಪ್ರಶಸ್ತಿಗಾಗಿ ನಾಮನಿರ್ದೇಶನ ಪಡೆದಿದ್ದಾರೆ.

'ದಿ ಬೆಸ್ಟ್ ಫಿಫಾ ಮೆನ್ಸ್ ಪ್ಲೇಯರ್' ಪ್ರಶಸ್ತಿಗಾಗಿ 14 ಆಟಗಾರರ ಆಯ್ದ ಪಟ್ಟಿಯನ್ನು ಫಿಫಾ ಬಿಡುಗಡೆಗೊಳಿಸಿದೆ. ಅಲ್ಲದೆ ಮತದಾನ ಮಾಡಲು ಅಭಿಮಾನಿಗಳನ್ನು ಕೋರಿದೆ.

ಇತ್ತೀಚೆಗೆ ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಗೋಲುಗಳ ಅಂತರದ ಗೆಲುವು ದಾಖಲಿಸಿದ್ದ ಅರ್ಜೇಂಟೀನಾ ಮೂರನೇ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿಯಿತು.

ಇದನ್ನೂ ಓದಿ: 

 

 

36 ವರ್ಷಗಳ ಬಳಿಕ ಅರ್ಜೆಂಟೀನಾ ಮತ್ತೆ ವಿಶ್ವಕಪ್ ಗೆದ್ದು ಬೀಗಿತು. ತಮ್ಮ ಕೊನೆಯ ವಿಶ್ವಕಪ್ ಫೈನಲ್‌ನಲ್ಲಿ ಎರಡು ಗೋಲು ಬಾರಿಸಿದ್ದ ಮೆಸ್ಸಿ, ಪ್ರಶಸ್ತಿ ಕನಸನ್ನು ನನಸುಗೊಳಿಸಿದರು. ಈ ಮೂಲಕ ಗೋಲ್ಡನ್ ಬಾಲ್ ತಮ್ಮದಾಗಿಸಿಕೊಂಡರು.

 

ಇದೇ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲುಗಳ ಸಾಧನೆ ಮಾಡಿದ್ದ ಎಂಬಾಪೆ ಕೂಡಾ ಪ್ರಶಸ್ತಿ ರೇಸ್‌ನಲ್ಲಿದ್ದಾರೆ. ಈ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಗೋಲು ದಾಖಲಿಸಿದ್ದ ಅವರು ಗೋಲ್ಡನ್ ಬೂಟ್ ಬಾಚಿಕೊಂಡರು.

ಬ್ರೆಜಿಲ್‌ನ ನೇಮರ್, ಅರ್ಜೇಂಟೀನಾದ ಜೂಲಿಯನ್‌ ಅಲ್ವಾರೆಜ್‌, ಕ್ರೋವೆಷಿಯಾದ ಲುಕಾ ಮೊಡ್ರಿಕ್, ಈಜಿಪ್ಟ್‌ನ ಮೊಹಮ್ಮದ್ ಸಲಾ ಮುಂತಾದವರು ಸ್ಪರ್ಧಾ ಕಣದಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು