ಸೋಮವಾರ, ಅಕ್ಟೋಬರ್ 26, 2020
25 °C

ಕೋವಿಡ್‌ –19 ಪರೀಕ್ಷೆಗೆ ಹಾಜರಾಗದ ಮೆಸ್ಸಿ: ಕ್ಲಬ್ ತೊರೆಯುವ ವದಂತಿ

ಎಪಿ Updated:

ಅಕ್ಷರ ಗಾತ್ರ : | |

Prajavani

ಮ್ಯಾಡ್ರಿಡ್‌ : ಬಾರ್ಸಿಲೋನಾ ಫುಟ್‌ಬಾಲ್ ತಂಡದ ಆಟಗಾರರಿಗೆ ಅಗತ್ಯವಾಗಿದ್ದ ಕಡ್ಡಾಯ ಕೋವಿಡ್‌–19 ಪರೀಕ್ಷೆಗೆ ಲಯೊನೆಲ್‌ ಮೆಸ್ಸಿ ಭಾನುವಾರ ಗೈರುಹಾಜರಾಗಿದ್ದಾರೆ. ಇದರಿಂದ, ಅವರು ಕ್ಲಬ್ ತೊರೆಯುತ್ತಾರೆ ಎಂಬ ವದಂತಿಗೆ ಮತ್ತೊಂದು ಸಂಕೇತ ದೊರೆತಂತಾಗಿದೆ.  

‘ಕ್ಲಬ್‌ನ ತರಬೇತಿ ಕೇಂದ್ರದಲ್ಲಿ ಕೋವಿಡ್‌ ಪರೀಕ್ಷೆಗೆ ಎಲ್ಲರೂ ಒಳಗಾಗಿದ್ದು, ಮೆಸ್ಸಿ ಮಾತ್ರ ಹಾಜರಾಗಿಲ್ಲ‘ ಎಂದು ಬಾರ್ಸಿಲೋನಾ ಕ್ಲಬ್‌ ಹೇಳಿದೆ. ತಂಡವು ಮುಂಬರುವ ಋತುವಿನ ಟೂರ್ನಿಗಳನ್ನು ಕಣಕ್ಕಿಳಿಯಲು ಸೋಮವಾರದಿಂದ ತರಬೇತಿ ನಡೆಸಲಿದೆ.

ಮೆಸ್ಸಿ ಅವರು ಹೋದ ವಾರ ಕ್ಲಬ್‌ ತೊರೆಯುವ ಒಲವು ವ್ಯಕ್ತಪಡಿಸಿದ್ದರು. ಆದರೆ ಬಾರ್ಸಿಲೋನಾ, ‌2021ರ ಜೂನ್‌ವರೆಗೆ ಇರುವ ಒಪ್ಪಂದದವರೆಗೆ ಅವರು ಆಡಬೇಕೆಂದು ಬಯಸಿತ್ತು. 

ಕ್ಲಬ್‌ ತೊರೆಯುವ ನಿರ್ಧಾರವನ್ನು ಮಂಗಳವಾರ ಬ್ಯೂರೊಫ್ಯಾಕ್ಸ್ (ಟೆಲಿಗ್ರಾಂ ರೀತಿಯ ಆ್ಯಪ್‌) ಮೂಲಕ ಮೆಸ್ಸಿ ರವಾನಿಸಿದ್ದರು.

ಒಪ್ಪಂದದ ಕೊನೆಯಲ್ಲಿ ಬೇರೆ ತಂಡ ಸೇರಲು ತನಗೆ ಮುಕ್ತ ಅವಕಾಶ ನೀಡಬೇಕೆಂಬ ಶರತ್ತು ಮಾಡಿಕೊಂಡಿದ್ದನ್ನು ಅವರು ನೆನಪಿಸಿದ್ದರು. ಆದರೆ ಈ ಶರತ್ತಿನ ಅವಧಿ ಈಗಾಗಲೇ ಕೊನೆಗೊಂಡಿದೆ ಎಂದು ಕ್ಲಬ್‌ ಹೇಳಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು