ಶನಿವಾರ, ಮೇ 30, 2020
27 °C

ಕೊರೊನಾ ಹಾವಳಿ | ತಜಿಕಿಸ್ತಾನದಲ್ಲಿ ಕ್ರೀಡಾ ಚಟುವಟಿಕೆ ಸ್ತಬ್ಭ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ದುಶಾನಬೆ, ತಜಿಕಿಸ್ತಾನ: ಕೊರೊನಾ ಹಾವಳಿಯ ಆತಂಕ ಎದುರಿಸುತ್ತಿರುವ ತಜಿಕಿಸ್ತಾನ ಸರ್ಕಾರ ಕ್ರೀಡಾ ಚಟುವಟಿಕೆ ಮೇಲೆ ತಾತ್ಕಾಲಿಕ ನಿಷೇಧ ಹೇರಿದೆ. ಹೀಗಾಗಿ ತಜಿಕಿಸ್ತಾನ ಫುಟ್‌ಬಾಲ್ ಲೀಗ್‌ನ ಪಂದ್ಯಗಳು ಸೋಮವಾರದಿಂದ ಸ್ಥಗಿತಗೊಳ್ಳಲಿವೆ. 

‘ದೇಶಿ ಫುಟ್‌ಬಾಲ್ ಲೀಗ್‌ನ ಭಾನುವಾರದ ಪಂದ್ಯ ನಡೆದಿದೆ. ಕ್ರೀಡಾ ಚಟುವಟಿಕೆ ಮೇಲೆ ಹೇರಿರುವ ನಿಷೇಧ ಸದ್ಯ ಮೇ 10ರ ವರೆಗೆ ಜಾರಿಯಲ್ಲಿರುತ್ತದೆ. ಆ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ತಜಿಕ್ ಫುಟ್‌ಬಾಲ್ ಸಂಸ್ಥೆ ತಿಳಿಸಿದೆ.  

ದೇಶದಲ್ಲಿ ಫುಟ್‌ಬಾಲ್ ಋತು ಏಪ್ರಿಲ್ ನಾಲ್ಕರಂದು ಆರಂಭಗೊಂಡಿತ್ತು. ಈ ಸಂದರ್ಭದಲ್ಲಿ ವಿಶ್ವದಾದ್ಯಂತ ಲೀಗ್‌ಗಳು ನಿಂತು ಹೋಗಿದ್ದವು. ತುರ್ಕಮೆನಿಸ್ತಾನದಲ್ಲಿ ಏಪ್ರಿಲ್ 19ರಂದು ಲೀಗ್‌ ಆರಂಭಗೊಂಡಿತ್ತು. ನಂತರ ಸ್ಥಗಿತಗೊಳಿಸಲಾಗಿತ್ತು. ತುರ್ಕಮೆನಿಸ್ತಾನದಲ್ಲಿ ಈ ವರೆಗೆ ಒಂದು ಕೊರೊನಾ ಸೋಂಕು ಪ್ರಕರಣವೂ ಪತ್ತೆಯಾಗಲಿಲ್ಲ. ತಜಿಕಿಸ್ತಾನದಲ್ಲಿ ಸೋಂಕು ಇಲ್ಲ ಎಂದು ಸರ್ಕಾರ ಹೇಳುತ್ತಿದ್ದರೂ ಕೆಲವು ನಿಗೂಢ ಸಾವು ಸಂದೇಹಕ್ಕೆ ಎಡೆ ಮಾಡಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು