ಇಂಫಾಲ್ (ಪಿಟಿಐ): ರಿಯಲ್ ಕಾಶ್ಮೀರ್ ತಂಡವು ಶಿಸ್ತುಬದ್ಧ ಆಟವಾಡಿ, ಡುರಾಂಡ್ ಕಪ್ ಫುಟ್ಬಾಲ್ ಟೂರ್ನಿ ‘ಎಫ್’ ಗುಂಪಿನ ಪಂದ್ಯದಲ್ಲಿ ಭಾನುವಾರ ಮಣಿಪುರದ ನೆರೊಕಾ ಎಫ್ಸಿ ತಂಡವನ್ನು 3–1 ಗೋಲುಗಳಿಂದ ಸೋಲಿಸಿತು.

‘ಸ್ನೋ ಲೆಪರ್ಡ್ಸ್’ ತಂಡವು ಈ ಗೆಲುವಿನ ಮೂಲಕ ಆರು ಪಾಯಿಂಟ್ಗಳೊಡನೆ ಲೀಗ್ ವ್ಯವಹಾರ ಮುಗಿಸಿತು. ಮಂಗಳವಾರ ಭಾರತೀಯ ನೌಕಪಾಡೆ ಮತ್ತು ಟ್ರಾವು ಎಫ್ಸಿ ನಡುವಣ ನಡೆಯಲಿರುವ ಪಂದ್ಯವು ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಕ್ವಾರ್ಟರ್ಫೈನಲ್ ತಲುಪುವ ತಂಡವನ್ನು ನಿರ್ಧರಿಸಲಿದೆ.

ಕುಮಾನ್ ಲಂಪಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅನುಭವಿ ಡಿಫೆಂಡರ್ ಸಲಾಮ್ ರಂಜನ್ ಸಿಂಗ್ ಅವರು ರಿಯಲ್ ಕಾಶ್ಮೀರ್ ತಂಡಕ್ಕೆ 32ನೇ ನಿಮಿಷ ತಂಡಕ್ಕೆ ಮುನ್ನಡೆ ಒದಗಿಸಿದರು. ಲುಕಾಸ್ ಚೋಗಾಸ್ 67ನೇ ನಿಮಿಷ ಆತಿಥೇಯ ತಂಡದ ಪರ ಸ್ಕೋರ್ ಮಾಡಿದರು. ಮರೆತ್ ತರೆಕ್ (70ನೇ ನಿಮಿಷ) ಮತ್ತು ಮೊದೌ ಬೆಂಗ್ಯು (82ನೇ ನಿಮಿಷ) ಅವರು ಐ ಲೀಗ್ ತಂಡವಾದ ರಿಯಲ್ ಪರ ಇನ್ನೆರಡು ಗೋಲು ಗಳಿಸಿ ಗೆಲುವನ್ನು ಖಚಿತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.