ಗುರುವಾರ , ಮೇ 13, 2021
22 °C
ಕೆಎಸ್‌ಎಫ್ಎ ಮಹಿಳಾ ಸೆವೆನ್ ಎ ಸೈಡ್ ಎ ಡಿವಿಷನ್ ಫುಟಬಾಲ್‌ ಟೂರ್ನಿ

ಫುಟಬಾಲ್‌ ಟೂರ್ನಿ: ರೂಟ್ಸ್ ಎಫ್‌ಸಿಗೆ ಭರ್ಜರಿ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ತ್ರಿಶಾ ಗಳಿಸಿದ ಎರಡು ಗೋಲುಗಳ ನೆರವಿನಿಂದ ರೂಟ್ಸ್ ಮಹಿಳಾ ಫುಟ್‌ಬಾಲ್ ಕ್ಲಬ್ ತಂಡವು ಕೆಎಸ್‌ಎಫ್‌ಎ ಮಹಿಳಾ ಸೆವೆನ್ ಎ ಸೈಡ್‌ ಎ ಡಿವಿಷನ್ ಫುಟ್‌ಬಾಲ್ ಲೀಗ್ ಪಂದ್ಯದಲ್ಲಿ ಯಂಗ್ ಚಾಲೆಂಜರ್ಸ್ ತಂಡವನ್ನು 5–0ರಿಂದ ಸೋಲಿಸಿತು.

ಬುಧವಾರ ನಡೆದ ಪಂದ್ಯದಲ್ಲಿ ವಿಜೇತ ತಂಡದ ತ್ರಿಶಾ (2 ಮತ್ತು ಏಳನೇ ನಿಮಿಷ), ಶರ್ಮಿಳಾ (23ನೇ ನಿಮಿಷ), ಲಕ್ಷ್ಮಿ (29ನೇ ನಿಮಿಷ) ಹಾಗೂ ಶ್ರಾವ್ಯಾ (37ನೇ ನಿಮಿಷ) ಕಾಲ್ಚಳಕ ತೋರಿದರು.

ಇನ್ನೊಂದು ಪಂದ್ಯದಲ್ಲಿ ನಾರ್ತ್‌ ಕರ್ನಾಟಕ ತಂಡವು 1–0ಯಿಂದ ಎಫ್‌ಸಿ ಹೈಡ್ರಾ ಎದುರು ಗೆದ್ದಿತು. ಹೈಡ್ರಾ ತಂಡದ ವಸ್ಲಾಯ 29ನೇ ನಿಮಿಷದಲ್ಲಿ ಎದುರಾಳಿ ತಂಡಕ್ಕೆ ಉಡೊಗೊರೆ ಗೋಲು ನೀಡಿದರು.

ಆತ್ಮಿಕಾ ಜಾರ್ಜ್‌ (7 ಹಾಗೂ 22ನೇ ನಿಮಿಷ) ದಾಖಲಿಸಿದ ಎರಡು ಗೋಲುಗಳ ಬಲದಿಂದ ಟೆಕ್ನಿಕೊ ಸ್ಪೋರ್ಟ್ಸ್ ಎಫ್‌ಸಿ ತಂಡವು 3–1ರಿಂದ ಯಂಗ್‌ ಜೆಮ್ಸ್ ಮಹಿಳಾ ಎಫ್‌ಸಿ ಎದುರು ಜಯಿಸಿತು. ವಿಜೇತ ತಂಡದ ಕ್ರಿಸ್ಟಿಯಾನಾ ಜಾರ್ಜ್‌ 35ನೇ ನಿಮಿಷದಲ್ಲಿ ಒಂದು ಗೋಲು ಹೊಡೆದರು. ನತಾನಿಯಾ ಮಾರ್ಟಿನ್‌ (3ನೇ ನಿಮಿಷ) ಯಂಗ್ ಜೆಮ್ಸ್ ತಂಡದ ಪರ ಗೋಲು ಗಳಿಸಿದರು.

ಮತ್ತೊಂದು ಪಂದ್ಯದಲ್ಲಿ ಮಾಡರ್ನ್‌ ಗರ್ಲ್ಸ್ ಎಫ್‌ಸಿ 2–0ರಿಂದ ಬೆಂಗಳೂರು ಪ್ಯಾಂಥರ್ಸ್‌ ತಂಡವನ್ನು ಸೋಲಿಸಿತು. ಮಾಡರ್ನ್ ಗರ್ಲ್ಸ್ ತಂಡದ ಟ್ರೇಸಿಯಾ (10ನೇ ನಿಮಿಷ) ಹಾಗೂ ಸಿಮ್ರನ್‌ (23ನೇ ನಿಮಿಷ) ತಲಾ ಒಂದು ಗೋಲು ಹೊಡೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು