ಬೆಂಗಳೂರು: ದಿಟ್ಟ ಆಟವಾಡಿದ ಕರ್ನಾಟಕ ತಂಡದವರು ಸಂತೋಷ್ ಟ್ರೋಫಿ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಪಂಜಾಬ್ ತಂಡದೊಂದಿಗೆ ಡ್ರಾ ಸಾಧಿಸಿದರು.
ಒಡಿಶಾದಲ್ಲಿ ನಡೆಯುತ್ತಿರುವ ಟೂರ್ನಿಯ ಎ ಗುಂಪಿನ ಹಣಾಹಣಿಯಲ್ಲಿ ಕರ್ನಾಟಕ 2–2ರಿಂದ ಪಂಜಾಬ್ ತಂಡದೊಂದಿಗೆ ಸಮಬಲ ಸಾಧಿಸಿತು. ಪಂಜಾಬ್ ತಂಡಕ್ಕಾಗಿ ಕಮಲ್ ದೀಪ್ (65ನೇ ನಿಮಿಷ) ಮತ್ತು ಬಿಪುಲ್ ಕಾಲಾ (69ನೇ ನಿ.) ಗೋಲು ಗಳಿಸಿ ಮುನ್ನಡೆ ತಂದುಕೊಟ್ಟಿದ್ದರು. ಕಮಲೇಶ್ ಪಿ. (82ನೇ ನಿ.) ಮತ್ತು ರಾಬಿನ್ ಯಾದವ್ (90+3ನೇ ನಿ.) ಗಳಿಸಿದ ಗೋಲುಗಳು ಕರ್ನಾಟಕ ಡ್ರಾ ಸಾಧಿಸಲು ಕಾರಣವಾದವು.
ಭಾನುವಾರ ನಡೆಯಲಿರುವ ಮುಂದಿನ ಪಂದ್ಯದಲ್ಲಿ ಕರ್ನಾಟಕ ತಂಡವು ಕೇರಳ ತಂಡವನ್ನು ಎದುರಿಸಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.