ನವದೆಹಲಿ (ಪಿಟಿಐ): ಮುಂದಿನ ತಿಂಗಳು ನಡೆಯಲಿರುವ ಎಎಫ್ಸಿ ಏಷ್ಯನ್ ಕಪ್ ಫುಟ್ಬಾಲ್ 2027ರ ಅಂತಿಮ ಸುತ್ತಿನ ಕ್ವಾಲಿಫೈರ್ಸ್ನಲ್ಲಿ ಆಡುವ ಭಾರತ ತಂಡಕ್ಕೆ 28 ಮಂದಿ ಸಂಭವನೀಯರನ್ನು ಬುಧವಾರ ಆಯ್ಕೆ ಮಾಡಲಾಗಿದೆ. ಕೋಚ್ ಮನೊಲೊ ಮಾರ್ಕ್ವೆಝ್ ಅವರು 40 ವರ್ಷ ವಯಸ್ಸಿನ ಸುನೀಲ್ ಚೆಟ್ರಿ ಸಾಮರ್ಥ್ಯದ ಮೇಲೆ ಭರವಸೆ ಇಟ್ಟು ತಂಡಕ್ಕೆ ಸೇರ್ಪಡೆ ಮಾಡಿದ್ದಾರೆ.

ಕಳೆದ ವರ್ಷ ನಿವೃತ್ತಿ ಪ್ರಕಟಿಸಿದ್ದ ತಾರಾ ಆಟಗಾರ ಚೆಟ್ರಿ ಅವರು ಮಾರ್ಚ್ನಲ್ಲಿ ನಿವೃತ್ತಿ ತೊರೆದು ರಾಷ್ಟ್ರೀಯ ತಂಡಕ್ಕೆ ಮರಳಿದ್ದರು.

ಭಾರತ ಎಎಫ್ಸಿ ಏಷ್ಯಾ ಕಪ್ ಅಂತಿಮ ಕ್ವಾಲಿಫೈರ್ಸ್ನಲ್ಲಿ ಸಿ ಗುಂಪಿನಲ್ಲಿದೆ. ಕೌಲೂನ್ನಲ್ಲಿ ಜೂನ್ 10ರಂದು ನಡೆಯಲಿರುವ ತನ್ನ ಮೊದಲ ಪಂದ್ಯವನ್ನು ಭಾರತ, ಆತಿಥೇಯ ಹಾಂಗ್ಕಾಂಗ್ ವಿರುದ್ಧ ಆಡಲಿದೆ.

ಸಂಭವನೀಯ ಪಟ್ಟಿಯಲ್ಲಿರುವ ಆಟಗಾರರು ಇದೇ 18ರಿಂದ ಕೋಲ್ಕತ್ತದಲ್ಲಿ ನಡೆಯುವ 10 ದಿನಗಳ ತರಬೇತಿ ಶಿಬಿರದಲ್ಲಿ ಭಾಗಿಯಾಗಲಿದ್ದಾರೆ’ ಎಂದು ಎಐಎಫ್ಎಫ್ ಪ್ರಕಟಣೆ ತಿಳಿಸಿದೆ. ಜೂನ್ 4ರಂದು ಸಿದ್ಧತೆಯ ಭಾಗವಾಗಿ ಬ್ಯಾಂಕಾಕ್ನಲ್ಲಿ ಥಾಯ್ಲೆಂಡ್ ವಿರುದ್ಧ ಸ್ನೇಹಪರ ಪಂದ್ಯದಲ್ಲಿ ಭಾಗಿಯಾಗಲಿದೆ. ನಂತರ ಅಲ್ಲಿಂದ ಕ್ವಾಲಿಫೈರ್ಸ್ನಲ್ಲಿ ಆಡಲು ಹಾಂಗ್ಕಾಂಗ್ಗೆ ತೆರಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.