ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಧರ ವಿಶ್ವ ಜೂನಿಯರ್ ಚೆಸ್‌: ಮುನ್ನಡೆಯಲ್ಲಿ ಇಬ್ಬರು

Published : 29 ಸೆಪ್ಟೆಂಬರ್ 2024, 15:26 IST
Last Updated : 29 ಸೆಪ್ಟೆಂಬರ್ 2024, 15:26 IST
ಫಾಲೋ ಮಾಡಿ
Comments

ಬೆಂಗಳೂರು: ಅಗ್ರ ಶ್ರೇಯಾಂಕದ ರೇಸಿಸ್ ಮಿಚಾಲ್ ಮತ್ತು ಎರಡನೇ ಶ್ರೇಯಾಂಕದ ಸಾಲೊಮನ್ ಜೂಲಿಯಾ ಅವರು 12ನೇ ಐಬಿಸಿಎ ಅಂಧರ ವಿಶ್ವ ಜೂನಿಯರ್ ಚೆಸ್‌ ಚಾಂಪಿಯನ್‌ಷಿಪ್‌ನ ಎರಡನೇ ಸುತ್ತಿನ ನಂತರ ತಲಾ ಎರಡು ಪಾಯಿಂಟ್‌ಗಳೊಡನೆ ಮುನ್ನಡೆ ಹಂಚಿಕೊಂಡಿದ್ದಾರೆ.

ಹಾಲಿ ಚಾಂಪಿಯನ್ ಆಗಿರುವ ಪೋಲೆಂಡ್‌ನ ಮಿಚಾಲ್ ಭಾನುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಸ್ವದೇಶದ ಫೇಬಿಯನ್ ಸ್ಪಿಯನ್‌ಕೋವಸ್ಕಿ ಅವರನ್ನು ಸೋಲಿಸಿದರೆ, ಈ ಕಣದಲ್ಲಿರುವ ಏಕೈಕ ಆಟಗಾರ್ತಿ ಜೂಲಿಯಾ (ಪೋಲೆಂಡ್‌) ಅವರು ಬಿಳಿ ಕಾಯಿಗಳಲ್ಲಿ ಆಡಿದ ಕಜಕಸ್ತಾನದ ಕುವಾನಶುಲಿ ನುರ್ಗಿಸಾ ಅವರನ್ನು ಮಣಿಸಿದರು.

ಭಾರತದ ರಾಹುಲ್ ವಘೇಲಾ ಮತ್ತು ಜಾನ್ ಹ್ಯಾರಿಸ್ ಸುಜಿನ್ (ತಲಾ 1.5 ಪಾಯಿಂಟ್) ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. ಒಟ್ಟು 12 ಮಂದಿ ಕಣದಲ್ಲಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ನಾಲ್ಕು ಮಂದಿ ಅಗ್ರಸ್ಥಾನದಲ್ಲಿದ್ದಾರೆ. ಅಗ್ರ ಶ್ರೇಯಾಂಕದ ಉಕ್ರೇನ್‌ನ ಆಟಗಾರ್ತಿ ಝಿಲ್ಟ್‌ಝೋವಾ ಲಿಸೆಂಕೊ ಲುಬೊವ್ (ಉಕ್ರೇನ್‌), ಎರಡನೇ ಶ್ರೇಯಾಂಕದ ಎಜಿಮನ್ ಎಮಿಲಿಯಾ (ಪೋಲೆಂಡ್‌), ಮೂರನೇ ಶ್ರೇಯಾಂಕದ ಲೌಸೆರ್ ಜೆಸಿಕಾ (ಅಮೆರಿಕ) ಮತ್ತು ಪೋಲೆಂಡ್‌ನ ಟ್ರಿಯೆನ್‌ಸ್ಕಾ ಎಮಿಲಿಯಾ ಮುನ್ನಡೆ ಹಂಚಿಕೊಂಡವರು.

ಎಜಿಮನ್ ಎಮಿಲಿಯಾ ಅವರು ಭಾರತದ ಮೇಘಾ ಚಕ್ರವರ್ತಿ ವಿರುದ್ಧ ಜಯಗಳಿಸಿದರು.

ಕಜಕಸ್ತಾನದ ಎಜೆನ್‌ಬಯೇವಾ ಎನ್ಲಿಕ್ ಮತ್ತು ಮುರಾಟೊವಾ ಆಲಿಯಾ ತಲಾ ಒಂದೂವರೆ ಪಾಯಿಂಟ್ಸ್‌ ಸಂಗ್ರಹಿಸಿ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. ಮಹಿಳಾ ವಿಭಾಗದಲ್ಲಿ 20 ಮಂದಿ ಪೈಪೋಟಿಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT