ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀವ್ ಗಾಂಧಿ ವಿವಿ ಅಥ್ಲೆಟಿಕ್ಸ್‌: ಆಳ್ವಾಸ್‌ ಕಾಲೇಜಿಗೆ ಚಾಂಪಿಯನ್‌ ಪಟ್ಟ

Published 30 ನವೆಂಬರ್ 2023, 14:38 IST
Last Updated 30 ನವೆಂಬರ್ 2023, 14:38 IST
ಅಕ್ಷರ ಗಾತ್ರ

ಮೂಡುಬಿದಿರೆ (ದಕ್ಷಿಣ ಕನ್ನಡ): ಆತಿಥೇಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸಸ್‌ ಸಂಸ್ಥೆ, ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಅಥ್ಲೆಟಿಕ್ ಕೂಟದ ಸಮಗ್ರ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು.

ಆಳ್ವಾಸ್ ಆಯುರ್ವೇದ ಕಾಲೇಜು ಆಶ್ರಯದಲ್ಲಿ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಗುರುವಾರ ಕೊನೆಗೊಂಡ ಕೂಟದ ಟ್ರ್ಯಾಕ್‌ನಲ್ಲಿ 7 ಸೇರಿದಂತೆ ಒಟ್ಟು 10 ಕೂಟ ದಾಖಲೆ ಬರೆದ ಆಳ್ವಾಸ್ ಅಲೈಡ್‌ ಹೆಲ್ತ್ ಸೈನ್ಸಸ್‌ ವಿದ್ಯಾರ್ಥಿಗಳು 144 ಪಾಯಿಂಟ್‌ ಕಲೆ ಹಾಕಿದರು. 20 ಚಿನ್ನ, 9 ಬೆಳ್ಳಿ ಮತ್ತು 5 ಕಂಚಿನ ಪದಕಗಳು ತಂಡದ ಪಾಲಾದವು.

ಪುರುಷ ಮತ್ತು ಮಹಿಳೆಯರ ವಿಭಾಗದ ಚಾಂ‍ಪಿಯನ್ ಪಟ್ಟವೂ ಆಳ್ವಾಸ್ ಅಲೈಡ್ ಹೆಲ್ತ್‌ ಸೈನ್ಸಸ್ ಸಂಸ್ಥೆಯ ಪಾಲಾಯಿತು. ಪುರುಷರ ವಿಭಾಗದಲ್ಲಿ 26 ಪಾಯಿಂಟ್ ಗಳಿಸಿದ ಮಂಡ್ಯ ವೈದ್ಯಕೀಯ ಕಾಲೇಜು ಮತ್ತು ಮಹಿಳೆಯರ ವಿಭಾಗದಲ್ಲಿ 33 ಪಾಯಿಂಟ್‌ಗಳೊಂದಿಗೆ ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಕಾಲೇಜು ರನ್ನರ್ ಅಪ್ ಸ್ಥಾನ ತನ್ನದಾಗಿಸಿಕೊಂಡಿತು. ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸಸ್‌ನ ದುರ್ಗಾ ಮತ್ತು ರಾಕೇಶ್ ಉತ್ತಮ ಅಥ್ಲೀಟ್ ಎನಿಸಿಕೊಂಡರು.

ಕೊನೆಯ ದಿನದ ಫಲಿತಾಂಶಗಳು

ಪುರುಷರ ವಿಭಾಗ: 400 ಮೀ ಓಟ: ಶರಣ್ (ಆಳ್ವಾಸ್ ಅಲೈಡ್ ಹೆಲ್ತ್‌ ಸೈನ್ಸಸ್ ಕಾಲೇಜು, ಮೂಡುಬಿದಿರೆ)-1, ಶದಾನ್ (ಆಳ್ವಾಸ್)-2, ಕ್ರಿಸ್ಪಿನ್ ದಾಸ್ (ಎಸ್‌.ವಿ. ನರ್ಸಿಂಗ್ ಕಾಲೇಜು, ಬೆಂಗಳೂರು)-3. ಕಾಲ: 49.4 ಸೆ (ಕೂಟದ ದಾಖಲೆ: ಹಿಂದಿನ ದಾಖಲೆ, 50 ಸೆ, ದೇವಯ್ಯ ಟಿ.ಎಚ್‌, ಆಳ್ವಾಸ್‌, 2019); 110 ಮೀ. ಹರ್ಡಲ್ಸ್: ರಘು (ಆಳ್ವಾಸ್)-1, ಸೂರ್ಯ (ಆಳ್ವಾಸ್)-2, ಅಂಕಿತ್ ಬಿ.ಶೆಟ್ಟಿ (ಎಸ್‌ಡಿಎಂ, ಧಾರವಾಡ)-3. ಕಾಲ: 15.9 ಸೆ; 10000 ಮೀ: ಪ್ರಣವ್ ಜಗದೀಶ್ (ಲಕ್ಷ್ಮಿ ಸ್ಮಾರಕ ಕಾಲೇಜು, ಮಂಗಳೂರು)-1, ಚಂದನ್ ಎಸ್ (ಆಳ್ವಾಸ್)-2, ವಿರೂಪಾಕ್ಷಿ ಸುಭಾಸ ದೊಡ್ಡಮನಿ (ಎವಿಎಸ್ ಆಯುರ್ವೇದ ಕಾಲೇಜು, ವಿಜಯಪುರ)-3. ಕಾಲ: 41 ನಿ, 13.3 ಸೆ; 4x400 ಮೀ ರಿಲೆ: ಮಂಡ್ಯ ವೈದ್ಯಕೀಯ ಕಾಲೇಜು-1, ಆಳ್ವಾಸ್ ಹೋಮಿಯೊಪಥಿ ಕಾಲೇಜು-2, ಎಸ್‌ಡಿಎಂ ಉಜಿರೆ-3. ಕಾಲ:47.7 ಸೆ; ಟ್ರಿಪಲ್ ಜಂಪ್: ರಾಜೇಶ್ (ಮಂಡ್ಯ ವೈದ್ಯಕೀಯ ಕಾಲೇಜು)-1, ಪ್ರಿನ್ಸನ್ ಪಿಂಟೊ (ಲಕ್ಷ್ಮಿ ಸ್ಮಾರ ಕಾಲೇಜು, ಮಂಗಳೂರು)-2, ರಘು (ಆಳ್ವಾಸ್)-3. ಅಂತರ: 12.6 ಮೀ.

ಮಹಿಳೆಯರ ವಿಭಾಗ: 400 ಮೀ

ವಿಸ್ಮಯಾ (ಆಳ್ವಾಸ್)-1, ಲಕ್ಷ್ಮಿ ವೈಷ್ಣವಿ (ಆಳ್ವಾಸ್)-2, ತ್ರಿಷಾ ಜೋಸೆಫ್ (ಅಂಬೇಡ್ಕರ್ ನರ್ಸಿಂಗ್ ಕಾಲೇಜು, ಬೆಂಗಳೂರು)-3. ಕಾಲ:1ನಿ 2.9 ಸೆ; 10000 ಮೀ: ಐಶ್ವರ್ಯಾ ಎಸ್.ವಿ (ಸಜ್ಜಲಶ್ರೀ ನರ್ಸಿಂಗ್ ಕಾಲೇಜು, ಬಾಗಲಕೋಟೆ)-1, ಮುಕ್ತಾಯಿ ಗುರಿಕಾರ್ (ಸಜ್ಜಲಶ್ರೀ, ಬಾಗಲಕೋಟೆ)-2, ಅಮೀನ್ ಫರಿಹಾ (ಸರ್ಕಾರಿ ಪ್ರಕೃತಿ ಚಿಕಿತ್ಸೆ ಕಾಲೇಜು, ಮೈಸೂರು)-3. ಕಾಲ: 1 ತಾಸು 5ನಿ 36.3 ಸೆ; 110 ಮೀ ಹರ್ಡಲ್ಸ್: ವಿಸ್ಮಯಾ (ಆಳ್ವಾಸ್)-1, ಎವ್ಲಿನ್ ತ್ರಿಸಾ ಜಾಯ್ (ಅಥೆನಾ ನರ್ಸಿಂಗ್ ಕಾಲೇಜು, ಮಂಗಳೂರು)-2, ಡಾಲಿಯಾ ಸಿ.ಸಿ (ಸೇಂಟ್‌ ಆ್ಯನ್ಸ್, ಮೂಲ್ಕಿ)-3. ಕಾಲ: 18 ಸೆ (ಕೂಟ ದಾಖಲೆ: ಹಳೆಯ ದಾಖಲೆ, 19.91 ಸೆ, ಖ್ಯಾತಿ ಎಸ್.ವಿ, ಬಿಎಂಸಿ ಕಾಲೇಜು ಮಂಗಳೂರು–2007); 4x400 ಮೀ ರಿಲೆ: ಆಳ್ವಾಸ್ ಅಲೈಡ್ ಹೆಲ್ತ್‌ ಸೈನ್ಸಸ್-1, ಆಳ್ವಾಸ್ ಪ್ರಕೃತಿ ಚಿಕಿತ್ಸೆ ಕಾಲೇಜು-2, ಎಸ್‌ಡಿಎಂ, ಉಜಿರೆ-3. ಕಾಲ:55.7 ಸೆ; ಟ್ರಿಪಲ್ ಜಂಪ್: ದುರ್ಗಾ (ಆಳ್ವಾಸ್)-1, ಅಮಲಾ ಸುರೇಶ್ (ಮಸೂದ್ ನರ್ಸಿಂಗ್ ಕಾಲೇಜು, ಮಂಗಳೂರು)-2, ಜ್ಯೋತಿಕಾ ಪಿ  (ಮಲ್ಲಿಗೆ ನರ್ಸಿಂಗ್ ಕಾಲೇಜು, ಬೆಂಗಳೂರು)-3. ದೂರ: 9.46 ಮೀ; ಹ್ಯಾಮರ್ ಥ್ರೋ: ಆದಿರಾ ಎನ್.ಕೆ (ಆಳ್ವಾಸ್)-1, ವಮಿಕಾ ಆರ್ (ಅಂಬೇಡ್ಕರ್ ಕಾಲೇಜು, ಬೆಂಗಳೂರು)-2, ನೇಹಾ ಮರಿಟಾ ಪಾಯಸ್ (ಫಾದರ್‌ ಮುಲ್ಲರ್, ಬೆಂಗಳೂರು)-3. ದೂರ: 15.83 ಮೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT