ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬ್ಲ್ಯುಎಫ್‌ಐ ಮತ್ತೆ ಅಮಾನತು: ಒತ್ತಾಯ

Published 15 ಫೆಬ್ರುವರಿ 2024, 22:08 IST
Last Updated 15 ಫೆಬ್ರುವರಿ 2024, 22:08 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಮೇಲೆ ಮತ್ತೆ ಅಮಾನತು ಹೇರಬೇಕೆಂದು ಒಲಿಂಪಿಕ್ ಪದಕ ವಿಜೇತ ಪೈಲ್ವಾನ್ ಬಜರಂಗ್ ಪೂನಿಯಾ ಗುರುವಾರ ಯುನೈಟೆಡ್‌ ವರ್ಲ್ಡ್‌ ರೆಸ್ಲಿಂಗ್‌ಗೆ ಒತ್ತಾಯಿಸಿದ್ದಾರೆ. ಸಂಜಯ್‌ ಸಿಂಗ್ ನೇತೃತ್ವದ ಫೆಡರೇಷನ್‌, ಕುಸ್ತಿಪಟುಗಳಲ್ಲಿ ‘ಭಯ ಮತ್ತು ಶೋಷಣೆಯ ಭಾವ ಮೂಡಿಸಿದೆ’ ಎಂದು ದೂರಿದ್ದಾರೆ.

ಫೆಡರೇಷನ್‌ ಮೇಲೆ ಕಳೆದ ಆಗಸ್ಟ್‌ನಲ್ಲಿ ಹೇರಿದ್ದ ನಿಷೇಧವನ್ನು, ಯುಡಬ್ಲ್ಯುಡಬ್ಲ್ಯು ಕಳೆದ ಮಂಗಳವಾರ ಹಿಂಪಡೆದಿತ್ತು. ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿದ್ದ ಫೆಡರೇಷನ್‌ ಅಧ್ಯಕ್ಷ ಬ್ರಿಜ್‌ ಭೂಷಣ್ ವಿರುದ್ಧ ನಡೆದ ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಬಜರಂಗ್, ಸಾಕ್ಷಿ, ವಿನೇಶಾ ವಿರುದ್ಧ ಯಾವುದೇ ರೀತಿಯ ತಾರತಮ್ಯ ನಡೆಸಬಾರದು ಎಂದು ಲಿಖಿತ ಖಾತರಿ ನೀಡಬೇಕೆಂದೂ ನಿರ್ದೇಶನ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT