ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸಿಂಗ್‌: ನಿಶಾಂತ್ ಶುಭಾರಂಭ, ಥಾಪಾಗೆ ಸೋಲು

Published 6 ಮಾರ್ಚ್ 2024, 19:02 IST
Last Updated 6 ಮಾರ್ಚ್ 2024, 19:02 IST
ಅಕ್ಷರ ಗಾತ್ರ

ಬುಸ್ಟೊ ಅರ್ಸಿಝಿಯೊ (ಇಟಲಿ),:ವಿಶ್ವ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತ ನಿಶಾಂತ್ ದೇವ್‌, ಪ್ರಥಮ ಒಲಿಂಪಿಕ್‌ ಬಾಕ್ಸಿಂಗ್ ಅರ್ಹತಾ ಟೂರ್ನಿಯಲ್ಲಿ 3–1 ರಿಂದ ಇಂಗ್ಲೆಂಡ್‌ನ ಲೂಯಿಸ್ ರಿಚರ್ಡ್ಸನ್‌ ಅವರನ್ನು ರೋಚಕ ಹೋರಾಟದಲ್ಲಿ ಸೋಲಿಸಿ ಬುಧವಾರ ಶುಭಾರಂಭ ಮಾಡಿದರು. ಆದರೆ ಇನ್ನೊಬ್ಬ ಅನುಭವಿ ಬಾಕ್ಸರ್ ಶಿವ ಥಾಪಾ ಸೋಲನುಭವಿಸಿದರು.

71 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ ನಿಶಾಂತ್ ಅವರು ಎದುರಾಳಿಯಾದ ಕಾಮನ್ವೆಲ್ತ್ ಗೇಮ್ಸ್‌ ಕಂಚಿನ ಪದಕ ವಿಜೇತ ರಿಚರ್ಡ್ಸನ್‌ ಎದುರು ಬೇಗನೇ ಹೊಂದಿಕೊಂಡು ಆಕ್ರಮಣಕ್ಕೆ ಇಳಿದು ಗೆಲ್ಲುವಲ್ಲಿ ಯಶಸ್ವಿ ಆದರು.

ಆದರೆ, ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಆರು ಸಲ ಪದಕ ಗೆದ್ದಿರುವ ಶಿವ ಥಾಪಾ (63.5 ಕೆ.ಜಿ) ಹೊರಬಿದ್ದರು. ಹಾಲಿ ಚಾಂಪಿಯನ್ ಆಗಿರುವ ಉಜ್ಬೇಕಿಸ್ತಾನದ ರಸ್ಲಾನ್ ಅಬ್ದುಲ್ಲೇವ್, ಭಾರತದ ಎದುರಾಳಿಯನ್ನು ಸೋಲಿ ಸಿದರು. ಕರಾರುವಾಕ್ ಪಂಚ್‌ ಗಳನ್ನು ಪ್ರದರ್ಶಿಸಿದ ರಸ್ಲಾನ್ ನಿರೀಕ್ಷೆ ಯಂತೆ ಆರಂಭದಿಂದಲೇ ಮೇಲುಗೈ ಸಾಧಿಸಿದರು. ಥಾಪಾ ಅವರ ರಕ್ಷಣೆಯನ್ನು ಹಲವು ಸಲ ಭೇದಿಸಿದರು.

ಲಕ್ಷ್ಯ ಚಾಹರ್ (80 ಕೆ.ಜಿ) ಅವರು ಮಂಗಳವಾರ ಇರಾನ್‌ನ ಗೆಶ್ಲಾಗಿ ಮೇಸಂ ಅವರಿಗೆ ಮಣಿದಿದ್ದರು.

ಈ ಪ್ರಥಮ ವಿಶ್ವ ಒಲಿಂಪಿಕ್‌ ಕ್ವಾಲಿಫೈರ್ಸ್‌ನಲ್ಲಿ 590 ಬಾಕ್ಸರ್‌ಗಳು ಕಣದಲ್ಲಿದ್ದಾರೆ. 28 ಪುರುಷರು ಮತ್ತು 21 ಮಹಿಳೆಯರು ಸೇರಿದಂತೆ ಒಟ್ಟು 49 ಮಂದಿಗೆ ಇಲ್ಲಿಂದ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಕೋಟಾ ಪಡೆಯಲು ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT