ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮನ್‌ವೆಲ್ತ್ ಗೇಮ್ಸ್‌: ಭಾರತದ ಏರಿಳಿತಗಳು

Last Updated 11 ಆಗಸ್ಟ್ 2022, 4:54 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್‌ನಲ್ಲಿ ಮುಕ್ತಾಯವಾದ 22ನೇ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್‌ಗಳ ಸಾಧನೆಯ ಚರ್ಚೆ ಈಗ ಜೋರಾಗಿ ನಡೆಯುತ್ತಿದೆ. ಯಾವ ವರ್ಷದ ಸಾಧನೆ ಹೆಚ್ಚು, ಯಾವುದು ಕಡಿಮೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ.

ಕಳೆದ ನಾಲ್ಕು ವರ್ಷಗಳ ಒಟ್ಟು ಪದಕ ಸಾಧನೆಯನ್ನು ಅವಲೋಕಿಸಿದರೆ ಈ ಬಾರಿಯದ್ದು ಕಡಿಮೆ ಪದಕಗಳು ಎಂಬಂತೆ ಕಾಣುತ್ತದೆ. ಆದರೆ, 2010ರಿಂದ 2018ರವರೆಗೂ ಕೂಟದಲ್ಲಿ ಶೂಟಿಂಗ್ ವಿಭಾಗ ಇತ್ತು.

ಈ ವಿಭಾಗದಲ್ಲಿ ಭಾರತದವರು ಹೆಚ್ಚು ಪದಕಗಳನ್ನು ಜಯಿಸಿದ್ದರು. ಆದರೆ ಈ ಬಾರಿ ಶೂಟಿಂಗ್ ಇರಲಿಲ್ಲ. ಆದರೂ 61 ಪದಕಗಳನ್ನು ಭಾರತ ಗೆದ್ದಿದೆ. ಗೋಲ್ಡ್‌ಕೋಸ್ಟ್‌ಗಿಂತ ಐದು ಪದಕಗಳಷ್ಟೇ ಕಡಿಮೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT