ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ಯಾಸ್ಕೆಟ್‌ಬಾಲ್‌ ಆಟಗಾರರಿಗೆ ಮಾಸಿಕ ವೇತನ

Published 20 ಆಗಸ್ಟ್ 2024, 15:38 IST
Last Updated 20 ಆಗಸ್ಟ್ 2024, 15:38 IST
ಅಕ್ಷರ ಗಾತ್ರ

ಬೆಂಗಳೂರು: ಸಂಭಾವನೆಯಿಲ್ಲದೆ ಹೈರಾಣಾಗಿರುವ ಬ್ಯಾಸ್ಕೆಟ್‌ ಬಾಲ್‌ ಆಟಗಾರರಿಗೆ ಆರ್ಥಿಕ ಉತ್ತೇಜನ ನೀಡಲು ಭಾರತ ಬ್ಯಾಸ್ಕೆಟ್‌ಬಾಲ್‌ ಫೆಡರೇಷನ್‌ (ಬಿಎಫ್‌ಐ) ಮುಂದಾಗಿದೆ.

ಬಿಎಫ್‌ಐ ಅಧ್ಯಕ್ಷ ಆಧವ್ ಅರ್ಜುನ ಈ ವಿಷಯವನ್ನು ಸೋಮವಾರ ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ. ‌ ‘ಬಿಎಫ್‌ಐ ಸುಮಾರು ₹ 14 ಕೋಟಿ ಆದಾಯವನ್ನು ಸುತ್ತು ನಿಧಿಯಿಂದ ಗಳಿಸಿದೆ. ಹೀಗಾಗಿ, ಕೆಲ ಆಟಗಾರರಿಗೆ ಮಾಸಿಕ ವೇತನ ನೀಡಲು ನಮ್ಮ ಬಳಿ ಆರ್ಥಿಕ ಸಂಪನ್ಮೂಲವಿದ್ದು, ಅದಕ್ಕಾಗಿ ಸರ್ಕಾರವನ್ನು ಅವಲಂಬಿಸಬೇಕಾಗಿಲ್ಲ’ ಎಂದು ಅವರು ಹೇಳಿದ್ದಾರೆ.

‘ಕೆಲವು ಅತ್ಯುತ್ತಮ ಆಟಗಾರರು ತಮ್ಮ ಉದ್ಯೋಗದಾತ ಸಂಸ್ಥೆಗಳಿಂದ ಕನಿಷ್ಠ ವೇತನವನ್ನು ಪಡೆಯುತ್ತಿದ್ದಾರೆ ಎಂಬುದು ನಮ್ಮ ಗಮನದಲ್ಲಿದೆ. ಹೀಗಾಗಿ, ಆರ್ಥಿಕ ನೆರವು ನೀಡಲು ಯೋಜನೆ ರೂಪಿಸುತ್ತಿದ್ದೇವೆ’ ಎಂದಿದ್ದಾರೆ. 

ಮುಂದಿನ ತಿಂಗಳು ನಡೆಯಲಿರುವ ಬಿಎಫ್‌ಐ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾಸಿಕ ವೇತನದ ವಿವರಗಳು ಸ್ಪಷ್ಟವಾಗಲಿದೆ. ಆಯ್ಕೆ ಸಮಿತಿಯ ಪ್ರತಿಭಾಶೋಧ ವಿಭಾಗವು ಒಟ್ಟು 32 ಆಟಗಾರರನ್ನು ಈ ಯೋಜನೆಗೆ ಆಯ್ಕೆ ಮಾಡಲಿದೆ. ಪುರುಷರು, ಮಹಿಳೆಯರು ಮತ್ತು 18 ವರ್ಷದೊಳಗಿನ ಆಟಗಾರರು ಇದರಲ್ಲಿ ಸೇರಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಆಟಗಾರರನ್ನು ಎ ಮತ್ತು ಬಿ ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಎ ಗುಂಪಿನ ಆಟಗಾರರು ತಿಂಗಳಿಗೆ ₹ 1 ಲಕ್ಷ ಮತ್ತು ಬಿ ಗುಂಪಿನ ಆಟಗಾರರು ₹ 50,000 ವೇತನ ಪಡೆಯಲಿದ್ದಾರೆ.

ಪ್ರತಿ ರಾಷ್ಟ್ರೀಯ ಮಟ್ಟದ ಟೂರ್ನಿಯ ಕೊನೆಯಲ್ಲಿ ಆಟಗಾರರ ಪಟ್ಟಿಯನ್ನು ನವೀಕರಿಸಲಾಗುತ್ತದೆ. ಇದಲ್ಲದೆ, ಮುಂದಿನ ಋತುವಿನಲ್ಲಿ ಅವರು ಯೋಜನೆಗೆ ಅರ್ಹರಾಗುತ್ತಾರೆಯೇ ಎಂದು ನಿರ್ಣಯಿಸಲು ಪ್ರತಿ ಆರು ತಿಂಗಳಿಗೊಮ್ಮೆ ಈ ಆಟಗಾರರ ಮೇಲೆ ಪ್ರಮಾಣೀಕೃತ ಫಿಟ್‌ನೆಸ್ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT