ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌ ರೈಫಲ್ ಸ್ಪರ್ಧೆ: ಭಾರತ ತಂಡಕ್ಕೆ ಚಿನ್ನ, ಬೆಳ್ಳಿ

Published 14 ಫೆಬ್ರುವರಿ 2024, 11:24 IST
Last Updated 14 ಫೆಬ್ರುವರಿ 2024, 11:24 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತದ ತಂಡಗಳು, ಸ್ಪೇನ್‌ನ ಗ್ರೆನೆಡಾದಲ್ಲಿ ನಡೆದ ಐಎಸ್‌ಎಸ್‌ಎಫ್‌ 10 ಮೀ. ವಿಶ್ವಕಪ್‌ ಟೂರ್ನಿಯ 10 ಮೀ. ಏರ್‌ ರೈಫಲ್ ಸ್ಪರ್ಧೆಯ ಮಿಶ್ರ ತಂಡ ವಿಭಾಗದಲ್ಲಿ ಚಿನ್ನ ಮತ್ತು ಬೆಳ್ಳಿಯ ಪದಕಗಳನ್ನು ಗೆದ್ದುಕೊಂಡವು.

ಮಹಿಳೆಯರ ಮತ್ತು ಪುರುಷರ ವೈಯಕ್ತಿಕ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದುಕೊಂಡಿದ್ದ ಇಶಾ ಅನಿಲ್ ತಕ್ಸಾಲೆ ಮತ್ತು ಉಮಾಮಹೇಶ ಮದ್ದಿನೇನಿ ಅವರನ್ನೊಳಗೊಂಡ ಮಿಶ್ರ ಡಬಲ್ಸ್ ತಂಡ ಮಂಗಳವಾರ ನಡೆದ ಫೈನಲ್‌ನಲ್ಲಿ ಸ್ವದೇಶದ ಅವನಿ ರಾಥೋಡ್ ಮತ್ತು ಅಭಿನವ್ ಶಾ ಜೋಡಿಯನ್ನು 16–8 ರಿಂದ ಸೋಲಿಸಿತು.

ಭಾರತ ಈ ಕೂಟದಲ್ಲಿ ಮೂರು ಚಿನ್ನ ಸೇರಿದಂತೆ ಏಳು ಪದಕಗಳನ್ನು ಗೆದ್ದುಕೊಂಡಿದೆ.

ಇದಕ್ಕೆ ಮೊದಲು, ದೃಷ್ಟಿ ಸಂಗ್ವಾನ್– ಪರಾಸ್ ಖೋಲಾ ಅವರಿದ್ದ ತಂಡ ಪಿಸ್ತೂಲ್ ಮಿಕ್ಸೆಡ್ ತಂಡ ವಿಭಾಗದಲ್ಲಿ ಆರನೇ ಸ್ಥಾನ ಪಡೆಯುವುದರೊಂದಿಗೆ ಪದಕ ಸುತ್ತಿಗೆ ಅರ್ಹತೆ ಪಡೆಯಲು ವಿಫಲವಾಯಿತು. ಜಾರ್ಜಿಯಾದ ಸ್ಪರ್ಧಿಗಳು ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಕೊರಳಿಗೇರಿಸಿಕೊಂಡರು.

ಈ ವಿಶ್ವಕಪ್‌ನಲ್ಲಿ 34 ಸದಸ್ಯರ ಭಾರತ ತಂಡ ಭಾಗವಹಿಸಿದೆ. ಜೂನಿಯರ್ ಮತ್ತು ಸೀನಿಯರ್ ವಿಭಾಗದ 10 ಮೀ. ಏರ್‌ ಗನ್ ಸ್ಪರ್ಧೆಗಳು ಮಾತ್ರ ಇಲ್ಲಿ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT