ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ಬಾಕ್ಸಿಂಗ್: ಫೈನಲ್‌ಗೆ ಮೇರಿ ಕೋಮ್

Last Updated 27 ಮೇ 2021, 15:50 IST
ಅಕ್ಷರ ಗಾತ್ರ

ದುಬೈ: ಆರು ಬಾರಿಯ ವಿಶ್ವ ಚಾಂಪಿಯನ್‌, ಭಾರತದ ಎಂ.ಸಿ.ಮೇರಿ ಕೋಮ್ ಅವರು ಇಲ್ಲಿ ನಡೆಯುತ್ತಿರುವ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ 51 ಕೆಜಿ ವಿಭಾಗದ ಫೈನಲ್ ಪ್ರವೇಶಿಸಿದ್ದಾರೆ. ಗುರುವಾರ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ಮಂಗೋಲಿಯಾದ ಲುಟ್ಸೈಖನ್ ಅಲ್ಟಂನ್ಸೆನ್ಸೆಗ್‌ ಅವರನ್ನು ಮೇರಿ 4–1ರಲ್ಲಿ ಮಣಿಸಿದರು.

ಅಗ್ರ ಶ್ರೇಯಾಂಕದ ಮೇರಿ ಕೋಮ್ ಪ್ರಬಲ ಪಂಚ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು. 38 ವರ್ಷದ ಮೇರಿ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಆರನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.

48 ಕೆಜಿ ವಿಭಾಗದಲ್ಲಿ ಮೋನಿಕಾ ಕಂಚಿನ ಪದಕಕ್ಕೆ ಸಮಾಧಾನಪಟ್ಟುಕೊಂಡರು. ಸೆಮಿಫೈನಲ್‌ನಲ್ಲಿ ಅವರು ಕಜಕಸ್ತಾನದ ಎರಡನೇ ಶ್ರೇಯಾಂಕಿತೆ ಅಲುವಾ ಬಲ್ಕಿಬೆಕೊವಾ ಎದುರು 0–5ರ ಸೋಲುಂಡರು.

ಬುಧವಾರ ರಾತ್ರಿಯ ಬೌಟ್‌ಗಳಲ್ಲಿ ಆಶಿಶ್ ಕುಮಾರ್ (75 ಕೆಜಿ) ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿರುವ ಕಜಕಸ್ತಾನದ ಅಬೀಲ್‌ಖಾನ್ ಅಮಾಂಕುಲ್ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ 2–3ರಲ್ಲಿ ಮಣಿದರು. ನರೇಂದರ್ (+91 ಕೆಜಿ) ಕಜಕಸ್ತಾನದ ಕಂಶಿಬೆಕ್ ಕುಂಕಬಯೆವ್‌ ಎದುರು 0–5ರಲ್ಲಿ ಸೋಲುಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT