ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ್ದ ಅತಿ ಕಿರಿಯ ಸ್ಪರ್ಧಿ ಎಂಬ ಹಿರಿಮೆಗೆ ಪಾತ್ರರಾಗಿರುವ ಸಿರಿಯಾದ 12 ವರ್ಷದ ಕ್ರೀಡಾಪಟು ಹೆಂಡ್ ಝಾಜಾ, ಟೇಬಲ್ ಟೆನಿಸ್ ಪಂದ್ಯಾವಳಿಯ ಮೊದಲ ಸುತ್ತಿನಿಂದಲೇ ನಿರ್ಗಮಿಸಿದ್ದಾರೆ.

ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ತಮಗಿಂತಲೂ ಮೂರು ಪಟ್ಟು ಹೆಚ್ಚು ವಯಸ್ಸಿನ ಆಸ್ಟ್ರಿಯಾದ ಎದುರಾಳಿ 39 ವರ್ಷದ ಲಿಯೂ ಜಿಯಾ ವಿರುದ್ಧ ಹೋರಾಟಕ್ಕಿಳಿದಿದ್ದ ಹೆಂಡ್ ಝಾಜಾ 0-4ರ ಅಂತರದಲ್ಲಿ ಸೋಲನುಭವಿಸಿದರು.

ಇದನ್ನೂ ಓದಿ:Tokyo Olympics: ಪದಕ ಬೇಟೆ ಆರಂಭ; ಮೊದಲ ಚಿನ್ನ ಗೆದ್ದ ಚೀನಾ ಶೂಟರ್

ಆದರೂ ಒಲಿಂಪಿಕ್ಸ್ನಲ್ಲಿ ಭಾಗವಹಿಸುವ ತಮ್ಮ ಕನಸನ್ನು ಎದುರಾಳಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸುವ ಮೂಲಕ ಸ್ಮರಣೀಯವಾಗಿಸಿದ್ದಾರೆ.

ಸಿರಿಯಾದ ಹಮಾದಲ್ಲಿ ಜನಿಸಿದ ಝಾಜಾ, ಐದರ ಹರೆಯದಿಂದಲೇ ಟೇಬಲ್ ಟೆನಿಸ್ ಆಡಲು ಪ್ರಾರಂಭಿಸಿದ್ದರು.

ಯುದ್ಧಪೀಡಿತ ಸಿರಿಯಾದಲ್ಲಿ ಕ್ರೀಡೆಗೆ ಬೇಕಾದಷ್ಟು ಪ್ರೋತ್ಸಾಹ ಸಿಗುತ್ತಿಲ್ಲ. ಈ ಎಲ್ಲದರ ನಡುವೆ ಝಾಜಾ ಭವಿಷ್ಯದ ತಾರೆಯಾಗುವ ಕನಸು ಕಟ್ಟಿಕೊಂಡಿದ್ದಾರೆ.

ಕಳೆದ ವರ್ಷ ಜೋರ್ಡಾನ್ನಲ್ಲಿ ನಡೆದ ಪಶ್ಚಿಮ ಏಷ್ಯಾ ಒಲಿಂಪಿಕ್ಸ್ ಅರ್ಹತಾ ಪಂದ್ಯಾವಳಿ ಗೆದ್ದು ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು.

ಝಾಜಾ 1992ರ ಬಳಿಕ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ ಅತಿ ಕಿರಿಯ ಕ್ರೀಡಾಪಟು ಆಗಿದ್ದಾರೆ. ಅಂದು ರೋಯಿಂಗ್ವಿಭಾಗದಲ್ಲಿ ಸ್ಪೇನ್ನ ಕಾರ್ಲೊಸ್ ಫ್ರಂಟ್ ತಮ್ಮ 11ರ ಹರೆಯದಲ್ಲಿ ಸ್ಪರ್ಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.