ಪುಣೆ: ತಮಿಳ್ ತಲೈವಾಸ್ ತಂಡ ಸ್ಪೂರ್ತಿಯುತ ಪ್ರದರ್ಶನ ನೀಡಿದರೂ, ದೇವಾಂಕ್ ಮತ್ತು ಅಯಾನ್ ಅವರು ಪರಿಣಾಮಕಾರಿ ರೇಡಿಂಗ್ನಿಂದ ಪಟ್ನಾ ಪೈರೇಟ್ಸ್ ಸೋಲದಂತೆ ನೋಡಿಕೊಂಡರು.

ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯ ಪಂದ್ಯದಲ್ಲಿ ಮೂರು ಬಾರಿಯ ಚಾಂಪಿಯನ್ ಪಟ್ನಾ 42–38 ರಿಂದ ತಲೈವಾಸ್ ತಂಡವನ್ನು ಸೋಲಿಸಿ ಲೀಗ್ನಲ್ಲಿ ಎರಡನೇ ಸ್ಥಾನಕ್ಕೇರಿತು.

ಶುಕ್ರವಾರ ನಡೆದ ಪಂದ್ಯದಲ್ಲಿ ದೇವಾಂಕ್ 12 ಮತ್ತು ಅಯಾನ್ 13 ಅಂಕಗಳನ್ನು ಗಳಿಸಿದರು. ಪ್ಲೇ ಆಫ್ ರೇಸ್ನಿಂದ ಬಹುತೇಕ ಹೊರಬಿದ್ದಿರುವ ತಮಿಳ್ ತಲೈವಾಸ್ ಪರ ಮೊಯಿನ್ ಶಫಘಿ 11 ಅಂಕ ಗಳಿಸಿದರೆ, ಸಚಿನ್ ಎಂಟು ಅಂಕಗಳ ಕೊಡುಗೆಯಿತ್ತರು.

ಬುಲ್ಸ್ಗೆ ದಯನೀಯ ಸೋಲು: ಸತತ ಸೋಲುಗಳಿಂದ ಕಂಗೆಟ್ಟಿರುವ ಬೆಂಗಳೂರು ಬುಲ್ಸ್ ಮುಖಭಂಗದಿಂದ ಹೊರಬಂದಿಲ್ಲ. ದಿನದ ಎರಡನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ 56–18 ರಿಂದ ಬುಲ್ಸ್ ತಂಡವನ್ನು ಸೋಲಿಸಿತು. ಬುಲ್ಸ್ಗೆ ಇದು 19 ಪಂದ್ಯಗಳಲ್ಲಿ 16ನೇ ಸೋಲು.

ಶನಿವಾರದ ಪಂದ್ಯಗಳು: ತೆಲುಗು ಟೈಟನ್ಸ್– ಗುಜರಾತ್ ಜೈಂಟ್ಸ್ (ರಾತ್ರಿ 8.00); ದಬಾಂಗ್ ಡೆಲ್ಲಿ– ಹರಿಯಾಣ ಸ್ಟೀಲರ್ಸ್ (ರಾತ್ರಿ 9)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.