ಬೆಂಗಳೂರು: ಹಾಸನ ಕ್ವೀನ್ಸ್ ಮತ್ತು ಬಳ್ಳಾರಿ ಕ್ವೀನ್ಸ್ ತಂಡಗಳು ಮಂಗಳವಾರ ಕ್ವೀನ್ಸ್ ಪ್ರೀಮಿಯರ್ ಲೀಗ್ನ (ಕ್ಯೂಪಿಎಲ್) ಎರಡನೇ ಆವೃತ್ತಿಯಲ್ಲಿ ಕ್ರಮವಾಗಿ ಗೋ ಕಾರ್ಟಿಂಗ್ ಮತ್ತು ಲೇಸರ್ ಟ್ಯಾಗ್ ಸ್ಪರ್ಧೆಗಳ ಪ್ರಶಸ್ತಿಯನ್ನು ಗೆದ್ದುಕೊಂಡವು.

ನಗರದ ಮಾರತ್ತಹಳ್ಳಿಯ ಇ–ಝೋನ್ನಲ್ಲಿ ಗೋ ಕಾರ್ಟಿಂಗ್, ಲೇಜರ್ ಟ್ಯಾಗ್ ಮತ್ತು ಬೌಲಿಂಗ್ ಸ್ಪರ್ಧೆಗಳು ನಡೆದವು. ಕ್ಯೂಪಿಎಲ್ ಸಂಸ್ಥಾಪಕ ಮಹೇಶ್ ಕುಮಾರ್ ಜೆ, ನಟ ಪ್ರಮೋದ್ ಶೆಟ್ಟಿ, ಸಂತೋಷ್ ಬಿಲ್ಲವ, ಪ್ರೇಮ್ ಮಲ್ಲೂರ್ ಮತ್ತು ಚೇತನ್ ಪರೀಕ್ ಉಪಸ್ಥಿತರಿದ್ದು, ಸ್ಪರ್ಧಿಗಳಿಗೆ ಪ್ರೋತ್ಸಾಹ ನೀಡಿದರು.

ಸ್ಟಾರ್ ಕ್ಯಾಪ್ಟನ್ಗಳನ್ನು ಒಳಗೊಂಡ ಹತ್ತು ತಂಡಗಳೂ ಎರಡನೇ ದಿನದ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡವು. ರೋಮಾಂಚಕಾರಿಯಾಗಿದ್ದ ಗೋ ಕಾರ್ಟಿಂಗ್ ಸ್ಪರ್ಧೆಯು ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು. ಸ್ಟಾರ್ ನಾಯಕಿಯರಾದ ಸಪ್ತಮಿ ಗೌಡ (ಬೆಂಗಳೂರು ಕ್ವೀನ್ಸ್) ಮತ್ತು ರಾಧಿಕಾ ನಾರಾಯಣ್ (ಚಿತ್ರದುರ್ಗ ಕ್ವೀನ್ಸ್) ಟ್ರ್ಯಾಕ್ನಲ್ಲಿ ಸೆಣಸಾಟ ನಡೆಸಿದ್ದು ಗಮನ ಸೆಳೆಯಿತು.

ಕೊನೆವರೆಗೂ ಛಲಬಿಡದೆ ಹೋರಾಟ ನಡೆಸಿದ ಹಾಸನ ಕ್ವೀನ್ಸ್ ತಂಡವು ಗೋ ಕಾರ್ಟಿಂಗ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಲೇಜರ್ ಟ್ಯಾಗ್ ಫೈನಲ್ಸ್ನಲ್ಲಿ ಬಳ್ಳಾರಿ ಕ್ವೀನ್ಸ್ ತಂಡ ಪಾರಮ್ಯ ಸಾಧಿಸಿತು. ಈ ಎರಡೂ ತಂಡಗಳು ಈ ಬಾರಿಯ ಅಭಿಯಾನದಲ್ಲಿ ಉತ್ತಮ ಆರಂಭ ಪಡೆದವು. ಬೌಲಿಂಗ್ ಲೀಗ್ ಫಲಿತಾಂಶ ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ.

ಸ್ಪರ್ಧೆಯ ಮೊದಲ ದಿನವಾದ ಸೋಮವಾರ ಬೆಂಗಳೂರು ನಗರ ವಿಶ್ವವಿದ್ಯಾಲಯದ ಆವರಣದಲ್ಲಿರುವ ಬೇಸ್ ಕ್ಯಾಂಪ್ನಲ್ಲಿ ಬ್ಯಾಸ್ಕೆಟ್ಬಾಲ್ ಮತ್ತು ಪಿಕಲ್ಬಾಲ್ ಲೀಗ್ನಲ್ಲಿ ಕೋಲಾರ ಕ್ವೀನ್ಸ್ ತಂಡವು ಎರಡೂ ಸ್ಪರ್ಧೆಗಳನ್ನು ಗೆಲ್ಲುವ ಮೂಲಕ ಆರಂಭಿಕ ಮುನ್ನಡೆ ಸಾಧಿಸಿತ್ತು.

ಬುಧವಾರದಿಂದ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಇತರ ಸ್ಪರ್ಧೆಗಳು ನಿಗದಿಯಾಗಿವೆ. ಒಳಾಂಗಣ ಆಟಗಳಾದ ಚೆಸ್, ಕ್ಯಾರಮ್, ಲುಡೋ ಮತ್ತು ಲಗೋರಿ ಸ್ಪರ್ಧೆಗಳು ಇಲ್ಲಿ ನಡೆಯಲಿವೆ.

ತಡರಾತ್ರಿವರೆಗೂ ನಡೆಯುತ್ತಿರುವ ಈ ಸ್ಪರ್ಧೆಗಳಲ್ಲಿ ಸಿನಿ ಕಲಾವಿದರು ಮತ್ತು ಸೆಲೆಬ್ರಿಟಿಗಳು ಹುರುಪಿನಿಂದ ಭಾಗವಹಿಸುತ್ತಿದ್ದಾರೆ. ಈ ಸ್ಪರ್ಧೆಗಳ ವೀಕ್ಷಣೆಗೆ ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿದ್ದು, ನೆಚ್ಚಿನ ಸಿನಿ ತಾರೆಯನ್ನು ಹುರಿದುಂಬಿಸಲು ಅವಕಾಶವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.