ಹುಬ್ಬಳ್ಳಿ: ತುಮಕೂರಿನಲ್ಲಿ ನಡೆದ ದಸರಾ ಓಪನ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಹುಬ್ಬಳ್ಳಿಯ 20 ಶೂಟರ್‌ಗಳು ಭಾಗವಹಿಸಿ, ಆರು ಚಿನ್ನ, ಒಂದು ಬೆಳ್ಳಿ, ಎರಡು ಕಂಚಿನ ಪದಕ ಜಯಿಸಿದರು.

ಮಹಿಳೆಯರ ವಿಭಾಗ: ಐಶ್ವರ್ಯ ಬಾಲೆಹೊಸೂರ್ (ಸೀನಿಯರ್ ಜೂನಿಯರ್ ಯೂತ್ ವಿಭಾಗ) ಮೂರು ಚಿನ್ನದ ಪದಕ ಹಾಗೂ ₹20,000 ನಗದು, ಬೃಂದಾ ಮರೊಳ್ (ರೈಫಲ್ ವಿಭಾಗ) ಬೆಳ್ಳಿದ ಪದಕದೊಂದಿಗೆ ₹3,000 ನಗದು ಬಹುಮಾನ ಪಡೆದರು.

ಪುರುಷರ ವಿಭಾಗ: ರಾಘವೇಂದ್ರ ಇಂಡಿ (ಪಿಸ್ತೂಲ್ ವಿಭಾಗ) ಚಿನ್ನದ ಪದಕ ಹಾಗೂ ₹5,000 ನಗದು, ಶ್ರೀಕರ್ ಸಬ್ಮಿಸ್ (ರೈಫಲ್ ವಿಭಾಗ) ಚಿನ್ನದ ಪದಕದೊಂದಿಗೆ ₹5,000 ನಗದು, ಆದರ್ಶ ನಿಕಂ (ರೈಫಲ್ ವಿಭಾಗ) ಕಂಚಿನ ಪದಕ ಮತ್ತು ₹2,000 ನಗದು ಬಹುಮಾನ ಗಳಿಸಿದರು.

ರೈಫಲ್ ತಂಡ ವಿಭಾಗದಲ್ಲಿ ಹರ್ಷ ಬದ್ರಾಪುರ, ಆದರ್ಶ ಮಿಕಂ, ಶ್ರೀಕರ್ ಸಬ್ಮಿಸ್ ಅವರು ಚಿನ್ನದ ಪದಕ ಹಾಗೂ ಪಿಸ್ತೂಲ್ ತಂಡ ವಿಭಾಗದಲ್ಲಿ ಕಂಚನ ಕಾರ್ತಿಕ್ ಶೆಟ್ಟಿ, ರಾಘವೇಂದ್ರ ಇಂಡಿಕುಮಾರ್ ಶರ್ಮಾ ಅವರು ಕಂಚಿನ ಪದಕ ಪಡೆದರು.

ಪದಕ ವಿತರಣಾ ಕಾರ್ಯಕ್ರಮದಲ್ಲಿ ಗೃಹಸಚಿವ ಜಿ. ಪರಮೇಶ್ವರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.