ಬೆಂಗಳೂರು: ಆರ್ನವ್ ಮಿಥುನ್ ಮತ್ತು ಸಾಕ್ಷ್ಯಾ ಸಂತೋಷ್ ಅವರು ಮಲ್ಲೇಶ್ವರಂ ಅಸೋಸಿಯೇಷನ್ ಆಶ್ರಯದ 5ನೇ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಶುಕ್ರವಾರ ಕ್ರಮವಾಗಿ ಹೋಪ್ಸ್ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಫೈನಲ್ ಪಂದ್ಯದಲ್ಲಿ ಆರ್ನವ್ 11–6, 11–7, 11–6 ರಿಂದ ಧ್ರುವ್ ಮುಂಜಿ ವಿರುದ್ಧ ಸುಲಭವಾಗಿ ಜಯಗಳಿಸಿದನು. ಇದಕ್ಕೆ ಮೊದಲು ಸೆಮಿಫೈನಲ್ ಪಂದ್ಯಗಳಲ್ಲಿ ಆರ್ನವ್ 11–4, 11–5, 11–4 ರಿಂದ ಪೂರಬ್ ಬಿಶ್ವಾಸ್ ವಿರುದ್ಧ, ಧ್ರುವ್ 11–7, 11–6, 11–8 ರಿಂದ ಆರ್ಯನ್ ಮೆನನ್ ವಿರುದ್ಧ ಗೆಲುವು ದಾಖಲಿಸಿದ್ದರು.

ಹೋಪ್ಸ್ ಬಾಲಕಿಯರ ಫೈನಲ್ನಲ್ಲಿ ಸಾಕ್ಷ್ಯಾ 11–2, 11–2, 11–6 ರಿಂದ ನಂದನಾ ಬಂಡಿ ವಿರುದ್ಧ ನಿರಾಯಾಸವಾಗಿ ಜಯಗಳಿಸಿದಳು. ಸೆಮಿಫೈನಲ್ ಪಂದ್ಯಗಳಲ್ಲಿ ಸಾಕ್ಷ್ಯಾ 11–1, 11–5, 11–8 ರಿಂದ ಸಾನ್ವಿ ಹರಿಪ್ರಸಾದ್ ರಾವ್ ವಿರುದ್ಧ, ನಂದನಾ 11–5, 11–9, 12–10 ರಲ್ಲಿ ತಮನ್ನಾ ನೇರ್ಲಜೆ ವಿರುದ್ಧ ಜಯಗಳಿಸಿದ್ದರು.

13 ವರ್ಷದೊಳಗಿನವರ ಬಾಲಕಿಯರ ಸಿಂಗಲ್ಸ್ನಲ್ಲಿ ಮಿಹಿಕಾ ಉಡುಪ ಚಾಂಪಿಯನ್ ಎನಿಸಿದಳು. ಫೈನಲ್ನಲ್ಲಿ ಮಿಹಿಕಾ 11–7, 11–8, 6–11, 11–2 ರಿಂದ ಯುಕ್ತಾ ಹರ್ಷಾ ಎದುರು ಗೆಲುವು ಪಡೆದಳು.

ಸೆಮಿಫೈನಲ್ ಪಂದ್ಯಗಳಲ್ಲಿ ಮಿಹಿಕಾ 11–5, 11–6, 11–3ರಿಂದ ತಮನ್ನಾ ನೇರ್ಲಜೆ ವಿರುದ್ಧ, ಯುಕ್ತಾ 11–8, 11–4, 11–8 ರಿಂದ ರಚಿತಾ ವಿರುದ್ಧ ಜಯಗಳಿಸಿದ್ದರು.

ಶುಭಂ ಚಾಂಪಿಯನ್: ನಾನ್ ಮೆಡಲಿಸ್ಟ್ ಸಿಂಗಲ್ಸ್ ಪ್ರಶಸ್ತಿ ಶುಭಂ ತ್ರಿವೇದಿ ಪಾಲಾಯಿತು. ಅವರು ಫೈನಲ್ನಲ್ಲಿ 11–6, 11–5, 6–11, 7–11, 11–4 ರಿಂದ ಸಂಜಯ್ ಅಯ್ಯಂಗಾರ್ ವಿರುದ್ಧ ಜಯಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.