ಬ್ಯಾಂಕಾಕ್: ಭಾರತದ ಅನುಭವಿ ಬ್ಯಾಡ್ಮಿಂಟನ್ ಪಟುಗಳಾದ ಸೈನಾ ನೆಹ್ವಾಲ್ ಮತ್ತು ಕಿದಂಬಿ ಶ್ರೀಕಾಂತ್ ಅವರಿಗೆ ಇನ್ನು ಆರು ತಿಂಗಳಲ್ಲಿ ಆರಂಭವಾಗುವ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಇನ್ನೂ ಸಾಧ್ಯವಾಗಿಲ್ಲ. ಈ ಅವಕಾಶ ಜೀವಂತವಾಗಿಟ್ಟುಕೊಳ್ಳಬೇಕಾದರೆ, ಬುಧವಾರ ಆರಂಭವಾಗುವ ಥಾಯ್ಲೆಂಡ್ ಮಾಸ್ಟರ್ಸ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಉತ್ತಮ ಸಾಧನೆ ತೋರಬೇಕಾಗಿದೆ.

ಕಳೆದ ವರ್ಷ ಸ್ಥಿರ ಪ್ರದರ್ಶನ ನೀಡಲು ವಿಫಲವಾಗಿರುವ ಕಾರಣ ಸೈನಾ ಮತ್ತು ಶ್ರೀಕಾಂತ್ ಅವರು ‘ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್‌ನ (ಬಿಡಬ್ಲ್ಯುಎಫ್)ಟೋಕಿಯೊ ರ‍್ಯಾಂಕಿಂಗ್'ನಲ್ಲಿ ಕ್ರಮವಾಗಿ 22 ಮತ್ತು 23ನೇ ಸ್ಥಾನದಲ್ಲಿದ್ದಾರೆ. ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಏಪ್ರಿಲ್ 26 ಅಂತಿಮ ದಿನವಾಗಿದೆ. ಅಂತಿಮ ಗಡುವಿನ ಒಳಗೆ ಪ್ರತಿ ಸಿಂಗಲ್ಸ್ ವಿಭಾಗದಲ್ಲಿ ಮೊದಲ 16ರೊಳಗೆ ಸ್ಥಾನ ಪಡೆದಲ್ಲಿ ಮಾತ್ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶ ದೊರೆಯಲಿದೆ.

ಥಾಯ್ಲೆಂಡ್ ಟೂರ್ನಿ ಸೇರಿದಂತೆ ಏಪ್ರಿಲ್‌ಗೆ ಮೊದಲು ಒಟ್ಟು ಎಂಟು ಟೂರ್ನಿಗಳು ಆಡಲು ಉಳಿದಿವೆ. ಈ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡಿದರೆ ಮಾತ್ರ ಭಾರತದ ಈ ಇಬ್ಬರು ಸ್ಪರ್ಧಿಗಳಿಗೆ ಟೋಕಿಯೊಗೆ ಟಿಕೆಟ್ ಖಚಿತಪಡಿಸಿಕೊಳ್ಳಬಹುದು.

ಸೈನಾ ಈ ಟೂರ್ನಿಯ ಮೊದಲ ಸುತ್ತಿನಲ್ಲಿ ಡೆನ್ಮಾರ್ಕ್‌ನ ಲಿನೆ ಹೊಜ್‌ಮಾರ್ಕ್ ವಿರುದ್ಧ ಆಡಲಿದ್ದಾರೆ. ಶ್ರೀಕಾಂತ್ ಪುರುಷರ ಸಿಂಗಲ್ಸ್‌ನಲ್ಲಿ ಶೆಸರ್ ಹಿರೆನ್ ರುಸ್ಟಾವಿಟೊ ಅವರನ್ನು ಮತ್ತೆ ಎದುರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.