ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಾ ಈಜುಪಟು ಪುನೀತ್‌ ಏಷ್ಯನ್‌ ದಾಖಲೆ

Published 4 ಜೂನ್ 2024, 23:42 IST
Last Updated 4 ಜೂನ್ 2024, 23:42 IST
ಅಕ್ಷರ ಗಾತ್ರ

ಬೆಂಗಳೂರು: ಅಂತರರಾಷ್ಟ್ರೀಯ ಪ್ಯಾರಾ ಈಜುಪಟು ಪುನೀತ್‌ ನಂದಕುಮಾರ್‌ ಅವರು ಜರ್ಮನಿಯಲ್ಲಿ ನಡೆದ ಪ್ಯಾರಾ ಈಜು ವಿಶ್ವ ಸರಣಿಯ ಕೂಟದಲ್ಲಿ 200 ಮೀಟರ್‌ ಬಟರ್‌ಫ್ಲೈ ಸ್ಪರ್ಧೆಯಲ್ಲಿ ಏಷ್ಯನ್‌ ದಾಖಲೆ ನಿರ್ಮಿಸಿದರು.

ಕರ್ನಾಟಕದ ಪುನೀತ್‌ ಅವರು 3 ನಿಮಿಷ 17.88 ಸೆಕೆಂಡ್‌ನಲ್ಲಿ ಗುರಿ ತಲುಪಿ ದಾಖಲೆ ಬರೆದರು. ಕೂಟದಲ್ಲಿ ಅವರು ಏಳನೇ ಸ್ಥಾನ ಪಡೆದರು. ಭಾರತದ ಮತ್ತೊಬ್ಬ ಸ್ಪರ್ಧಿ ಶ್ರೀಧರ್‌ ನಾಗಪ್ಪ ಮಾಲಗಿ (3 ನಿಮಿಷ 28.13ಸೆಕೆಂಡ್‌) ಎಂಟನೇ ಸ್ಥಾನ ಪಡೆದರು. ಬರ್ಲಿನ್‌ನಲ್ಲಿ ಮೇ 30ರಿಂದ ಜೂನ್‌ 2ರತನಕ ಕೂಟ ನಡೆಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT