ಬುಧವಾರ, ಫೆಬ್ರವರಿ 26, 2020
19 °C

‘ನಾಡಾ’ಕ್ಕೆ ನಟ ಸುನೀಲ್‌ ಶೆಟ್ಟಿ ರಾಯಭಾರಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ನಿರ್ಬಂಧ ಘಟಕ (ನಾಡಾ)ದ ರಾಯಭಾರಿಯಾಗಿ ನಟ ಸುನೀಲ್‌ ಶೆಟ್ಟಿ ಅವರು ಮಂಗಳವಾರ ನೇಮಕಗೊಳ್ಳಲಿದ್ದಾರೆ. ಅವರಿಗಿರುವ ತಾರಾಮೌಲ್ಯವನ್ನು ಬಳಸಿ, ಮಾದಕ ಮದ್ದುಸೇವನೆ ಪಿಡುಗಿನಿಂದ ದೇಶದ ಕ್ರೀಡಾಕ್ಷೇತ್ರವನ್ನು ಮುಕ್ತಗೊಳಿಸಬಹುದೆಂಬ ವಿಶ್ವಾಸವನ್ನು ನಾಡಾ ಹೊಂದಿದೆ.

ಈ ವರ್ಷ 150ಕ್ಕೂ ಹೆಚ್ಚು ಕ್ರೀಡಾಪಟುಗಳು ಮದ್ದುಸೇವನೆ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಇವರಲ್ಲಿ ಮೂರನೇ ಒಂದರಷ್ಟು ಮಂದಿ ದೇಹದಾರ್ಢ್ಯ ಪಟುಗಳು. ಟೋಕಿಯೊ ಒಲಿಂಪಿಕ್ಸ್‌ಗೆ ಎಂಟು ತಿಂಗಳು ಇರುವಾಗ ಈ ಬೆಳವಣಿಗೆ ಒಳ್ಳೆಯ ಸಂಕೇತವಲ್ಲ ಎಂದು ಭಾವಿಸಲಾಗಿದೆ.

ರಾಷ್ಟ್ರೀಯ ಮದ್ದುಸೇವನೆ ತಡೆ ಪ್ರಯೋಗಾಲಯವನ್ನು ‘ವಾಡಾ’ ಅಮಾನತ್ತಿನಲ್ಲಿ ಇಟ್ಟಿರುವುದರಿಂದ, ಭಾರತದಲ್ಲಿ ಸಂಗ್ರಹಿಸುವ ಮಾದರಿಗಳನ್ನು ದೇಶದ ಹೊರಗೆ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು