ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19: ಸ್ವಯಂ ಪ್ರತ್ಯೇಕವಾಸದಲ್ಲಿ ಲೂಯಿಸ್‌ ಹ್ಯಾಮಿಲ್ಟನ್‌

ಆರು ಬಾರಿಯ ವಿಶ್ವ ಚಾಂಪಿಯನ್‌
Last Updated 21 ಮಾರ್ಚ್ 2020, 14:24 IST
ಅಕ್ಷರ ಗಾತ್ರ

ಲಂಡನ್‌: ಆರು ಬಾರಿಯವಿಶ್ವ ಫಾರ್ಮುಲಾ ಒನ್‌ ಚಾಂಪಿಯನ್‌ ಲೂಯಿಸ್‌ ಹ್ಯಾಮಿಲ್ಟನ್‌ ಸ್ವಯಂ ಪ್ರತ್ಯೇಕವಾಸದಲ್ಲಿರುವುದಾಗಿ ಹೇಳಿಕೊಂಡಿದ್ದಾರೆ. ಕೊರೊನಾ ವೈರಸ್‌ ಸೋಂಕು ಮುನ್ನೆಚ್ಚರಿಕಾ ಕ್ರಮವಾಗಿ ಅವರು ಈ ನಿರ್ಧಾರ ತಳೆದಿದ್ದಾರೆ.

ಅವರು ಸೋಂಕು ಪರೀಕ್ಷೆಗೆ ಒಳಗಾಗಿಲ್ಲ. ತನಗಿಂತ ಇತರರ ಕಡೆ ಗಮನ ನೀಡುವುದು ಅಗತ್ಯ ಎಂದು ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ ಲಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬ್ರಿಟನ್‌ನ 35 ವರ್ಷದ ಹ್ಯಾಮಿಲ್ಟನ್‌ ಪಾಲ್ಗೊಂಡಿದ್ದರು. ಇದೇ ಕಾರ್ಯಕ್ರಮದಲ್ಲಿದ್ದ ನಟ ಇದ್ರಿಸ್‌ ಎಲ್ಬಾ ಹಾಗೂ ಕೆನಡಾ ಪ್ರಧಾನಿ ಪಿಯರ್‌ ಟ್ರುಡೊ ಅವರ ಪತ್ನಿ ಸೋಫಿ ಗ್ರೆಗೊಯಿರ್‌ ಟ್ರೂಡೊ ಅವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಹೀಗಾಗಿ ಹ್ಯಾಮಿಲ್ಟನ್‌ ಪ್ರತ್ಯೇಕವಾಸದ ಮೊರೆ ಹೋಗಿದ್ದಾರೆ.

‘ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ನನ್ನ ಆರೋಗ್ಯದ ಬಗ್ಗೆ ಅನುಮಾನಗಳು ಎದ್ದಿವೆ. ಸೋಂಕಿನ ಯಾವುದೇ ಲಕ್ಷಣಗಳು ನನ್ನಲ್ಲಿ ಕಂಡುಬಂದಿಲ್ಲ. ಆ ಕಾರ್ಯಕ್ರಮ ನಡೆದು 17 ದಿನಗಳಾಗಿವೆ. ಇದ್ರಿಸ್‌ ಅವರನ್ನು ಸಂಪರ್ಕಿಸಿದ್ದು ಅವರು ಕ್ಷೇಮವಾಗಿರುವುದು ಖುಷಿ ತರಿಸಿದೆ’ ಎಂದು ಹ್ಯಾಮಿಲ್ಟನ್‌ ಹೇಳಿದ್ದಾರೆ.

ಈ ವರ್ಷದ ಫಾರ್ಮುಲಾ ಒನ್‌ ಆರಂಭದ ಮೇಲೂ ಕೊರೊನಾ ಕರಿನೆರಳು ಕವಿದಿದೆ. ಆಸ್ಟ್ರೇಲಿಯಾ, ಬಹ್ರೇನ್‌, ವಿಯೆಟ್ನಾಂ, ಚೀನಾ, ನೆದರ್ಲೆಂಡ್ಸ್ ಹಾಗೂ ಸ್ಪೇನ್‌ನಲ್ಲಿ ನಡೆಯುವ ರೇಸ್‌ಗಳು ಮುಂದೂಡಲ್ಪಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT