ಶನಿವಾರ, ಸೆಪ್ಟೆಂಬರ್ 25, 2021
22 °C

ಭಾರತ ಹಾಕಿ ತಂಡದ ಗೋಲ್‌ ಕೀಪರ್‌ ಶ್ರೀಜೇಶ್‌ಗೆ ₹1 ಕೋಟಿ ಬಹುಮಾನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ಭಾರತ ಹಾಕಿ ತಂಡದ ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌ ಅವರಿಗೆ ಅಬುಧಾಬಿಯಲ್ಲಿ ನೆಲೆಸಿರುವ ಭಾರತದ ಉದ್ಯಮಿ ಡಾ.ಶಂಷೇರ್‌ ವಯಾಲಿಲ್‌ ಅವರು ₹1 ಕೋಟಿ ನಗದು ಬಹುಮಾನ ಘೋಷಿಸಿದ್ದಾರೆ.

ಒಲಿಂಪಿಕ್ಸ್‌ ಹಾಕಿಯಲ್ಲಿ ಪುರುಷರ ತಂಡ 41 ವರ್ಷಗಳ ಬಳಿಕ ಪದಕ ಗೆದ್ದು ಇತಿಹಾಸ ಬರೆದಿತ್ತು. ತಂಡದ ಕಂಚಿನ ಸಾಧನೆಯಲ್ಲಿ ಕೇರಳದ ಶ್ರೀಜೇಶ್‌ ಅವರ ಪಾತ್ರ ಮಹತ್ವದ್ದೆನಿಸಿತ್ತು.  

‘ತಂಡವು ಕಂಚಿನ ಪದಕ ಜಯಿಸುವಲ್ಲಿ ಶ್ರೀಜೇಶ್‌, ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಅವರ ಸಾಧನೆಯನ್ನು ಪರಿಗಣಿಸಿ ನಾವು ನಗದು ಬಹುಮಾನ ಘೋಷಿಸಿದ್ದೇವೆ’ ಎಂದು ವಿಪಿಎಸ್‌ ಹೆಲ್ತ್‌ಕೇರ್‌ನ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶಂಷೇರ್‌, ಸೋಮವಾರ ಟ್ವೀಟ್‌ ಮಾಡಿದ್ದಾರೆ.

ಜರ್ಮನಿ ಎದುರಿನ ‘ಪ್ಲೇ ಆಫ್‌’ ಹಣಾಹಣಿಯಲ್ಲಿ ಭಾರತ 5–4 ಗೋಲುಗಳಿಂದ ಮುನ್ನಡೆ ಗಳಿಸಿತ್ತು. ಅಂತಿಮ ಕ್ವಾರ್ಟರ್‌ನ ಆಟ ಮುಗಿಯಲು ಆರು ಸೆಕೆಂಡುಗಳು ಬಾಕಿ ಇದ್ದಾಗ ಜರ್ಮನಿಗೆ ಪೆನಾಲ್ಟಿ ಕಾರ್ನರ್‌ ಲಭಿಸಿತ್ತು. ಈ ಅವಕಾಶದಲ್ಲಿ ಶ್ರೀಜೇಶ್‌ ಎದುರಾಳಿಗಳ ಗೋಲುಗಳಿಕೆಯ ಪ್ರಯತ್ನವನ್ನು ವಿಫಲಗೊಳಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು