ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics | ಟ್ರ್ಯಾಂಪೊಲಿನ್ ಜಿಮ್ನಾಸ್ಟಿಕ್ಸ್: ಚೀನಾ ಪಾರಮ್ಯ

Last Updated 30 ಜುಲೈ 2021, 10:22 IST
ಅಕ್ಷರ ಗಾತ್ರ

ಟೋಕಿಯೊ: ಅಮೋಘ ಸಾಮರ್ಥ್ಯ ತೋರಿದ ಚೀನಾ ಸ್ಪರ್ಧಿಗಳು ಟ್ರ್ಯಾಂಪೊಲಿನ್ ಜಿಮ್ನಾಸ್ಟಿಕ್ಸ್‌ನ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಪಾರಮ್ಯ ಮೆರೆದರು.

ಟೋಕಿಯೊ ಕ್ರೀಡಾಕೂಟದಲ್ಲಿ ಈ ವಿಭಾಗದ ಚಿನ್ನ ಮತ್ತು ಬೆಳ್ಳಿ ಪದಕಗಳು ಶುಕ್ರವಾರ ಚೀನಾದ ಪಾಲಾದವು. 56.635 ಸ್ಕೋರ್ ಗಳಿಸಿದ ಜು ಕ್ಷುಯಿಂಗ್‌ ಚಿನ್ನದ ಪದಕ ತಮ್ಮದಾಗಿಸಿಕೊಂಡರೆ, 56.350 ಪಾಯಿಂಟ್ಸ್ ಕಲೆಹಾಕಿದ 2014ರ ವಿಶ್ವ ಚಾಂಪಿಯನ್‌ ಲೀ ಲಿಂಗ್‌ಲಿಂಗ್ ಬೆಳ್ಳಿ ಪದಕಕ್ಕೆ ಮುತ್ತಿಟ್ಟರು.

2012 ಹಾಗೂ 2016ರ ಒಲಿಂಪಿಕ್ಸ್‌ಗಳಲ್ಲಿ ಈ ವಿಭಾಗದಲ್ಲಿ ಚಿನ್ನ ಗೆದ್ದಿದ್ದ ಕೆನಡಾದ ರೋಸಿ ಮೆಕ್‌ಲೆನಾನ್‌ ಅವರ ಹ್ಯಾಟ್ರಿಕ್ ಜಯದ ಕನಸು ಈಡೇರಲಿಲ್ಲ. ಅವರು ಇಲ್ಲಿ ನಾಲ್ಕನೇ ಸ್ಥಾನ ಗಳಿಸಿದರು.

ಗ್ರೇಟ್‌ ಬ್ರಿಟನ್‌ನ ಬ್ರಿಯೊನಿ ಪಾಜ್‌ ಕಂಚಿನ ಪದಕಕ್ಕೆ ಸಮಾಧಾನಪಡಬೇಕಾಯಿತು. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಅವರು ಬೆಳ್ಳಿ ಪದಕ ಗೆದ್ದುಕೊಂಡಿದ್ದರು.

ಒಲಿಂಪಿಕ್ಸ್‌ನಲ್ಲಿ ಟ್ರ್ಯಾಂಪೊಲಿನ್‌ ವಿಭಾಗದಲ್ಲಿ ಜಂಟಿ 11 ಪದಕಗಳನ್ನು ಗೆದ್ದ ದಾಖಲೆಯನ್ನು ಚೀನಾ ಹೊಂದಿದ್ದರೂ, ಮಹಿಳೆ ಅಥವಾ ಪುರುಷರ ವಿಭಾಗದಲ್ಲಿ ಇಬ್ಬರು ‘ಪೋಡಿಯಂ ಫಿನಿಶ್‘ ಮಾಡಿದ್ದು ಇದೇ ಮೊದಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT