ಶುಕ್ರವಾರ, ಮೇ 27, 2022
22 °C

ಹಾಕಿ ಶಿಬಿರ: ಸಂಭವನೀಯ ತಂಡದಲ್ಲಿ ಸವಿತಾ, ರಾಣಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬೆಂಗಳೂರಿನಲ್ಲಿ ನಡೆಯುವ ತರಬೇತಿ ಶಿಬಿರಕ್ಕೆ ರಾಷ್ಟ್ರೀಯ ಮಹಿಳಾ ಹಾಕಿ ಸಂಭವನೀಯರ ತಂಡವನ್ನು ಹಾಕಿ ಇಂಡಿಯಾ ಭಾನುವಾರ  ಪ್ರಕಟಿಸಿದೆ. ಟೋಕಿಯೊ ಒಲಿಂಪಿಕ್ಸ್ ಸಿದ್ಧತೆಯ ಭಾಗವಾಗಿ ಈ ಶಿಬಿರವನ್ನು ಆಯೋಜಿಸಲಾಗುತ್ತಿದ್ದು 25 ಆಟಗಾರ್ತಿಯರಿಗೆ ಅವಕಾಶ ನೀಡಲಾಗಿದೆ.

ಸಂಭವನೀಯ ತಂಡವು ಈಗಾಗಲೇ ಬೆಂಗಳೂರಿನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರದಲ್ಲಿದ್ದು (ಸಾಯ್‌), ಕಡ್ಡಾಯ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಬೇಕಿದೆ. ಏಪ್ರಿಲ್ 7ರಂದು ರಾಷ್ಟ್ರೀಯ ಶಿಬಿರ ಕೊನೆಗೊಳ್ಳಲಿದೆ.

ಜನವರಿಯಲ್ಲಿ ಅರ್ಜೆಂಟೀನಾ ಪ್ರವಾಸ ಕೈಗೊಂಡಿದ್ದ ತಂಡವು ಒಂದೂ ಜಯವನ್ನು ಸಂಪಾದಿಸಿರಲಿಲ್ಲ. ಆದರೂ ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ತಂಡದ ಎದುರು ಭಾರತ ತೋರಿದ ಸಾಮರ್ಥ್ಯದ ಕುರಿತು ಮುಖ್ಯ ಕೋಚ್ ಶೋರ್ಡ್‌ ಮ್ಯಾರಿಜ್‌ ಸಂತಸ ವ್ಯಕ್ತಪಡಿಸಿದ್ದಾರೆ.

‘ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಲಾಕ್‌ಡೌನ್ ಬಳಿಕ ಮೊದಲ ಬಾರಿ ಪ್ರವಾಸ ಕೈಗೊಂಡಿದ್ದೆವು. ಪಂದ್ಯದಿಂದ ಪಂದ್ಯಕ್ಕೆ ನಾವು ಸುಧಾರಣೆ ಕಂಡಿದ್ದೆವು. ಟೋಕಿಯೊ ಒಲಿಂಪಿಕ್ಸ್‌ಗೆ ಇದೊಂದು ಸಕಾರಾತ್ಮಕ ಅಂಶ‘ ಎಂದು ಮ್ಯಾರಿಜ್ ನುಡಿದರು.

ತಂಡ ಇಂತಿದೆ: ಗೋಲ್‌ಕೀಪರ್ಸ್‌: ಸವಿತಾ, ರಜಿನಿ ಎತಿಮರ್ಪು ಮತ್ತು ಬೈಚು ದೇವಿ ಖರಿಬಂ.

ಡಿಫೆಂಡರ್ಸ್‌: ದೀಪ್ ಗ್ರೇಸ್ ಎಕ್ಕಾ, ರೀನಾ ಖೋಕರ್‌, ಸಲೀಮಾ ಟೆಟೆ, ಮನ್‌ಪ್ರೀತ್ ಕೌರ್, ಗುರ್ಜಿತ್ ಕೌರ್‌ ಮತ್ತು ನಿಶಾ.

ಮಿಡ್‌ಫೀಲ್ಡರ್ಸ್‌: ನಿಕ್ಕಿ ಪ್ರಧಾನ್‌, ಮೋನಿಕಾ, ನೇಹಾ, ಲಿಲಿಮಾ ಮಿನ್ಜ್‌, ಸುಶೀಲಾ ಚಾನು ಪುಖ್ರಂಬಮ್‌ ಮತ್ತು ನಮಿತಾ ಟೊಪ್ಪೊ.

ಫಾರ್ವರ್ಡ್ಸ್: ರಾಣಿ ರಾಂಪಾಲ್, ಲಾಲ್‌ರೆಮ್ಸಿಯಾಮಿ, ವಂದನಾ ಕಟಾರಿಯಾ, ನವಜೋತ್ ಕೌರ್‌, ನವನೀತ್ ಕೌರ್‌, ರಾಜ್ವಿಂದರ್ ಕೌರ್‌, ಜ್ಯೋತಿ, ಶರ್ಮಿಳಾ ದೇವಿ, ಉದಿತಾ ಮತ್ತು ರಶ್ಮಿತಾ ಮಿನ್ಜ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು