ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್ ಹಾಕಿ: ಫೈನಲ್ ನಡೆಯದಿದ್ದರೆ ಎರಡೂ ತಂಡಗಳಿಗೆ ಚಿನ್ನ

Last Updated 16 ಜುಲೈ 2021, 11:01 IST
ಅಕ್ಷರ ಗಾತ್ರ

ಟೋಕಿಯೊ: ಒಲಿಂಪಿಕ್ಸ್‌ನಲ್ಲಿ ಕೋವಿಡ್‌ ಪ್ರಕರಣಗಳ ಕಾರಣದಿಂದ ಫೈನಲ್‌ನಲ್ಲಿ ಒಂದು ತಂಡ ಆಡಲು ಸಾಧ್ಯವಾಗದಿದ್ದರೆ ಪ್ರಶಸ್ತಿ ಸುತ್ತಿಗೆ ತಲುಪಿದ ಎರಡೂ ತಂಡಗಳಿಗೂ ಚಿನ್ನದ ಪದಕ ನೀಡಲಾಗುವುದು ಎಂದು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ (ಎಫ್‌ಐಎಚ್‌) ಶುಕ್ರವಾರ ತಿಳಿಸಿದೆ.

ಆದರೆ ಸೋಂಕು ಪ್ರಕರಣಗಳು ದೃಢಪಟ್ಟರೆ ಸ್ಪರ್ಧೆಗಳಿಂದ ಹಿಂದೆ ಸರಿಯುವ ವಿವೇಚನೆಯು ಆಯಾ ತಂಡದ್ದಾಗಿರಲಿದೆ ಎಂದು ಎಫ್‌ಐಎಚ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಥಿಯರಿ ವೇಲ್ ಹೇಳಿದ್ದಾರೆ.

ಟೋಕಿಯೊ ಕ್ರೀಡಾಕೂಟಕ್ಕಾಗಿ ಎಫ್‌ಐಎಚ್‌ ರೂಪಿಸಿದ ನಿರ್ದಿಷ್ಟ ಕ್ರೀಡಾ ನಿಯಮಗಳ (ಎಸ್‌ಎಸ್‌ಆರ್‌) ಪ್ರಕಾರ, ತಂಡವೊಂದು ಗುಂಪು ಹಂತದ ಪಂದ್ಯವನ್ನು ಆಡಲು ಸಾಧ್ಯವಾಗದಿದ್ದರೆ, ಎದುರಾಳಿ ತಂಡಕ್ಕೆ 5–0 ಗೋಲುಗಳ ಅಂತರದ ಗೆಲುವು ಎಂದು ಪರಿಗಣಿಸಲಾಗುತ್ತದೆ. ಒಂದೊಮ್ಮೆ ಎರಡೂ ತಂಡಗಳು ಕಣಕ್ಕಿಳಿಯದಿದ್ದರೆ ಆ ಪಂದ್ಯವನ್ನು ಡ್ರಾ ಎಂದು ಪರಿಗಣಿಸಲಾಗುವುದು. ಆದಾಗ್ಯೂ ತಮಗೆ ಸಾಧ್ಯ ಎನಿಸಿದರೆ ಗುಂಪಿನ ಉಳಿದ ಪಂದ್ಯಗಳನ್ನು ಆ ತಂಡಗಳು ಆಡಬಹುದಾಗಿದೆ.

‘ಫೈನಲ್‌ನಿಂದ ಎರಡೂ ತಂಡಗಳು ಹೊರಗುಳಿಯುವ ಪರಿಸ್ಥಿತಿ ಬಂದರೆ ಇಬ್ಬರಿಗೂ ಚಿನ್ನದ ಪದಕಗಳನ್ನು ನೀಡಲಾಗುವುದು. ಕ್ರೀಡಾ ನಿಯಮಗಳಲ್ಲಿ ಇದನ್ನು ಈಗಾಗಲೇ ಉಲ್ಲೇಖಿಸಲಾಗಿದೆ‘ ಎಂದು ವೇಲ್ ನುಡಿದರು.

‘ಎಲ್ಲ ಕ್ರೀಡಾಕೂಟಗಳಿಗಿಂತ ಈ ಬಾರಿಯ ಒಲಿಂಪಿಕ್ಸ್ ಭಿನ್ನವಾಗಿದೆ. ಈ ಕೂಟ ಇತಿಹಾಸದ ಪುಟದಲ್ಲಿ ದಾಖಲಾಗಲಿದೆ. ಸಾರ್ವಜನಿಕರ ಆರೋಗ್ಯ ಅಪಾಯದಲ್ಲಿದೆ ಎಂದು ಕ್ರೀಡಾಪಟುಗಳು ಮತ್ತು ಕೂಟದ ಭಾಗೀದಾರರಿಗೆ ತಿಳಿದಿದೆ‘ ಎಂದು ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ವೇಲ್ ನುಡಿದರು.

‘ಸೋಂಕು ಪ್ರಕರಣಗಳಿದ್ದರೂ ಆಡಬಹುದು': ಆರರಿಂದ ಏಳು ಪ್ರಕರಣಗಳು ದೃಢಪಟ್ಟಿದ್ದರೂ ಆ ತಂಡವು ಪಂದ್ಯದಲ್ಲಿ ಆಡಬಹುದಾಗಿದೆ. ಇಡೀ ತಂಡವೇ ಸೋಂಕಿಗೆ ಒಳಪಟ್ಟಿದ್ದರೆ ಮಾತ್ರ ಹಿಂದೆ ಸರಿಯಬಹುದು. ಆದರೆ ಹಾಗೆ ಆಗುವುದಿಲ್ಲ ಎಂಬುದು ನನ್ನ ಅಭಿಪ್ರಾಯ ಎಂದು ವೇಲ್ ಹೇಳಿದರು.

ಹಾಕಿ ಪಂದ್ಯಗಳ ಆಯೋಜನೆಯ ಕುರಿತು ಇನ್ನೂ ಹಲವು ಸಂದೇಹಗಳು ಮುಂದುವರಿದಿದ್ದು, ಇವುಗಳಿಗೆ ಸ್ಷಷ್ಟತೆ ಸಿಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT