ಬುಧವಾರ, ಏಪ್ರಿಲ್ 1, 2020
19 °C
ಮೂರ್ನಾಡು ಕಾಲೇಜಿಗೆ ಪ್ರಶಸ್ತಿ

ಕ್ರೀಡಾಸಕ್ತಿ ಇದ್ದರೆ ಜೀವನೋತ್ಸಾಹ ಹೆಚ್ಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿರಾಜಪೇಟೆ: ಕ್ರೀಡಾಸಕ್ತಿ ಇದ್ದರೆ ಜೀವನೋತ್ಸಾಹವು ಹೆಚ್ಚಾಗುತ್ತದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಂತರರಾಷ್ಟ್ರೀಯ ಮಾಜಿ ಹಾಕಿ ಆಟಗಾರ ಡಾ.ಎಂ.ಪಿ.ಗಣೇಶ್ ಅಭಿಪ್ರಾಯಪಟ್ಟರು.

ಬೆಂಗಳೂರಿನ ಎಚ್.ಎಸ್.ಆರ್ ಲೇಔಟ್‌ನ ಕೊಡವ ಸಮಾಜ, ಕರ್ತುರ ಮುದ್ದಪ್ಪರವರ ಕುಟುಂಬ ಹಾಗೂ ಪಟ್ಟಣದ ಕಾವೇರಿ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಮೈದಾನದಲ್ಲಿ ಭಾನುವಾರ ನಡೆದ ದಕ್ಷಿಣ ವಲಯ ಆಹ್ವಾನಿತ ಕರ್ತುರ ಮುದ್ದಪ್ಪ ಮತ್ತು ಗೌರಿ ಮುದ್ದಪ್ಪ ಜ್ಞಾಪಕಾರ್ಥ ಅಂತರ್‌ ಕಾಲೇಜು ಹಾಕಿ ಟೂರ್ನಿ ಸಮರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಬೇಕೆಂದರೆ ಪ್ರತಿಭೆ, ಕಠಿಣ ಪರಿಶ್ರಮ ಹಾಗೂ ಗುರಿ ಸಾಧಿಸುವ ಛಲವಿರಬೇಕು. ಯುವಜನತೆ ಇತರೆ ಆಕರ್ಷಣೆಗೆ ಒಳಗಾಗದೆ ಅತ್ಯತ್ತಮ ಜೀವನ ಕಟ್ಟಿಕೊಳ್ಳಲು ಪರಿಶ್ರಮಪಡಬೇಕು ಎಂದರು.

ಡಾ.ಬೆಳ್ಳಿಯಪ್ಪ ಮಾತನಾಡಿ, ಕ್ರೀಡೆಯು ಇಂದು ಹಲವಾರು ಅವಕಾಶಗಳನ್ನು ತೆರೆದಿಟ್ಟಿದೆ. ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುವುದರಿಂದ ಉತ್ತಮ ಜೀವನ ಕಟ್ಟಿಕೊಳಬಹುದು. ಕ್ರೀಡೆಯಿಂದಾಗಿ ನಾವು ಮಾನಸಿಕ ಮತ್ತು ಶಾರೀರಿಕವಾಗಿ ಸದೃಡ ಜೀವನ ನಡೆಸಲು ಸಾಧ್ಯ ಎಂದರು.

ಅಂತರರಾಷ್ಟ್ರೀಯ ಮಾಜಿ ಹಾಕಿ ಆಟಗಾರರಾದ ಚೆಪ್ಪುಡಿರ ಪೂಣಚ್ಚ ಮತ್ತು ಕೂತಂಡ ಪೂಣಚ್ಚ ಮಾತನಾಡಿದರು.

ವೇದಿಕೆಯಲ್ಲಿ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಇಟ್ಟಿರ ಕಮಲಾಕ್ಷಿ, ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ. ಎನ್.ಎಂ.ನಾಣಯ್ಯ, ಕಾಲೇಜಿನ ದೈಹಿಕ ಶಿಕ್ಷಣದ ನಿರ್ದೇಶಕರಾದ ಡಾ.ಎಂ.ಎಂ.ದೇಚಮ್ಮ ಮತ್ತು ಎಂ.ಎ.ನಾಚಪ್ಪ, ಪಂದ್ಯಾವಳಿಯ ಸಂಚಾಲಕರಾದ ಚಿಮ್ಮಣಮಾಡ ಸೋಮಣ್ಣ, ಬೆಂಗಳೂರಿನ ಲೋಕೇಶ್, ನಾಥನ್, ಹಾಗೂ ರವಿಗೌಡ ಉಪಸ್ಥಿತರಿದ್ದರು. ಚೆಪ್ಪುಡಿರ ಕಾರ್ಯಪ್ಪ ಮತ್ತು ಮಾಳೇಟಿರ ಶ್ರೀನಿವಾಸ್ ಪಂದ್ಯಾಟದ ವೀಕ್ಷಕ ವಿವರಣೆಯನ್ನು ನೀಡಿದರು.

ಮೂರ್ನಾಡು ಕಾಲೇಜಿಗೆ ಪ್ರಶಸ್ತಿ : ಮೂರ್ನಾಡು ಪ್ರಥಮ ದರ್ಜೆ ಕಾಲೇಜು ತಂಡವು ಅಂತಿಮ ಪಂದ್ಯದಲ್ಲಿ ವಿರಾಜಪೇಟೆ ಕಾವೇರಿ ಕಾಲೇಜು ತಂಡವನ್ನು ಮಣಿಸುವ ಮೂಲಕ ಪ್ರಶಸ್ತಿಯನ್ನು ಪಡೆದುಕೊಂಡಿತು. ಅಂತಿಮ ಪಂದ್ಯದಲ್ಲಿ ಮೂರ್ನಾಡು ಪ್ರಥಮ ದರ್ಜೆ ಕಾಲೇಜು ತಂಡವು ಕಾವೇರಿ ಕಾಲೇಜು ತಂಡವನ್ನು 5-2 ಅಂತರದಿಂದ ಸೋಲಿಸಿ, ಟ್ರೋಫಿ ಹಾಗೂ ₹15 ಸಾವಿರ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು.

ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ವಿರಾಜಪೇಟೆಯ ಕಾವೇರಿ ಪದವಿ ಕಾಲೇಜಿನ ಪೊನ್ನಣ್ಣ ಎ.ಎಂ ಪಡೆದುಕೊಂಡರೆ, ಬೆಂಗಳೂರಿನ ಸೆಂಟ್ ಜೊಸೆಫ್ ಕಾಲೇಜಿನ ಬೋಪಯ್ಯ ಉತ್ತಮ ಮಿಡ್ ಫೀಲ್ಡರ್ ಪ್ರಶಸ್ತಿ, ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನ ಪ್ರಜ್ವಲ್ ಉತ್ತಮ ಡಿಫೆಂಡರ್ ಹಾಗೂ ಮಂಜು ಉತ್ತಮ ಗೋಲ್ ಕೀಪರ್, ಉತ್ತಮ ಮುನ್ನಡೆ ಆಟಗಾರ ಪ್ರಶಸ್ತಿಯನ್ನು ಕಾವೇರಿ ಕಾಲೇಜಿನ ಬೋಪಣ್ಣ ಸಿ.ಎಂ. ಪಡೆದುಕೊಂಡರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು