ಗುರುವಾರ , ಮೇ 26, 2022
31 °C

ಏಷ್ಯನ್ ಆರ್ಚರಿ ಚಾಂಪಿಯನ್‌ಷಿಪ್‌: ಫೈನಲ್‌ಗೆ ಭಾರತ ತಂಡಗಳು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಢಾಕಾ: ಉತ್ತಮ ಸಾಮರ್ಥ್ಯ ತೋರಿದ ಭಾರತದ ಪುರುಷ, ಮಹಿಳಾ ಮತ್ತು ಮಿಶ್ರ ವಿಭಾಗದ ತಂಡಗಳು ಏಷ್ಯನ್ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ ತಲುಪಿವೆ. ಇದರೊಂದಿಗೆ ಮಂಗಳವಾರ ಕನಿಷ್ಠ ಮೂರು ಪದಕಗಳನ್ನು ಖಚಿತಪಡಿಸಿದವು.

ಕಾಂಪೌಂಡ್‌ ವಿಭಾಗದ ಸೆಮಿಫೈನಲ್‌ಗಳಲ್ಲಿ ಸೋತ ಪುರುಷ, ಮಹಿಳಾ ಮತ್ತು ಮಿಶ್ರ ವಿಭಾಗದ ತಂಡಗಳೂ ಕನಿಷ್ಠ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಳ್ಳಲಿವೆ.

ಅಂಕಿತಾ ಭಕತ್‌, ಮಧು ವೇದ್ವಾನ್‌ ಹಾಗೂ ರಿಧಿ ಅವರಿದ್ದ ಮಹಿಳೆಯರ ತಂಡವು ಸೆಮಿಫೈನಲ್ ಹಣಾಹಣಿಯಲ್ಲಿ 6–0ಯಿಂದ ವಿಯೆಟ್ನಾಂ ತಂಡವನ್ನು ಸೋಲಿಸಿತು. ಕ್ವಾರ್ಟರ್‌ಫೈನಲ್‌ನಲ್ಲಿ ತಂಡಕ್ಕೆ ಬೈ ಸಿಕ್ಕಿತ್ತು. ಪುರುಷರ ರಿಕರ್ವ್ ವಿಭಾಗದ ನಾಲ್ಕರ ಘಟ್ಟದ ಪಂದ್ಯದಲ್ಲಿ ಪ್ರವೀಣ್ ಜಾಧವ್‌, ಕಪಿಲ್ ಹಾಗೂ ಪಾರ್ಥ್ ಸಾಳುಂಕೆ ಅವರಿದ್ದ ತಂಡವು ಬಾಂಗ್ಲಾದೇಶವನ್ನು ಮಣಿಸಿತು.

ಮಿಶ್ರ ವಿಭಾಗದ ಕಾಂಪೌಂಡ್‌ ಸ್ಪರ್ಧೆಯಲ್ಲಿ ರಿಷಭ್ ಯಾದವ್ ಹಾಗೂ ಜ್ಯೋತಿ ಸುರೇಖಾ ವೆನ್ನಂ ಅವರಿದ್ದ ತಂಡವು ಕಜಕಸ್ತಾನ ತಂಡವನ್ನು ಮಣಿಸಿ ಪ್ರಶಸ್ತಿ ಸುತ್ತು ತಲುಪಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು